ಫೆ.14: ಕೊಂಕಣಿ ನಾಟಕ ಪ್ರದರ್ಶನ
Update: 2019-02-12 23:18 IST
ಮಂಗಳೂರು, ಫೆ.12: ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬದ ಪ್ರಯುಕ್ತ ಫೆ.14ರಂದು ಸಂಜೆ 6 ಗಂಟೆಗೆ ಮಿಲಾಗ್ರಿಸ್ ದೇವಾಲಯದ ತೆರೆದ ಮೈದಾನದಲ್ಲಿ ಬಲಿಪೂಜೆ ಮತ್ತು ನವೇನ ಪ್ರಾರ್ಥನೆಯ ಬಳಿಕ ‘ಸಾಂತ್ ಆಂತೊನಿ, ಪತ್ರ್ ಪತಿಕ್ ಪಾವಯ್’ ಎಂಬ 2ಡಿ ಕೊಂಕಣಿ ನಾಟಕವು ಪ್ರದರ್ಶನಗೊಳ್ಳಲಿದೆ.
1729ರಲ್ಲಿ ಸ್ಪೇನ್ ದೇಶದಲ್ಲಿ ನಡೆದ ಪವಾಡ ಈ ನಾಟಕದಲ್ಲಿ ಅನಾವರಣಗೊಳ್ಳಲಿದ್ದು, ಕ್ಲೇರನ್ಸ್ ಪಿಂಟೊ ಪಡೀಲ್ ರಚಿಸಿದ್ದರೆ. ವಿನ್ಸೆಂಟ್ ಫೆರ್ನಾಂಡಿಸ್ ನಿರ್ದೇಶಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದ್ದಾರೆ.