ಕೂಳೂರು ಶ್ರೀ ಅಮೃತಾ ನರ್ಸರಿ ಸ್ಕೂಲ್‌ನ ವಾರ್ಷಿಕೋತ್ಸವ
Update: 2019-02-12 23:19 IST
ಮಂಗಳೂರು, ಫೆ.12: ಮಕ್ಕಳು ಮುಗ್ಧರು. ಅವರ ಭಾವನಾತ್ಮಕ ಮನಸ್ಸು ಅತಿಸೂಕ್ಷ್ಮ. ಪೋಷಕರು ಆದರ್ಶಯುತ ಬದುಕನ್ನು ಬಾಳುವ ಮೂಲಕ ಅವರನ್ನು ಚಾರಿತ್ರ್ಯವಂತರನ್ನಾಗಿಸಿ ರೂಪಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ ಎಂದು ನ್ಯಾಯವಾದಿ ವಿವೇಕಾನಂದ ಪನಿಯಾಲ ಹೇಳಿದರು.
ಕೂಳೂರು ಶ್ರೀ ಅಮೃತಾ ನರ್ಸರಿ ಸ್ಕೂಲ್‌ನ ಏಳನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣಗೈದರು.
ಶಾಸಕ ಡಾ. ವೈ ಭರತ್ ಶೆಟ್ಟಿ, ಉಪ ಮೇಯರ್ ಕೆ.ಮುಹಮ್ಮದ್, ಮಂಗಳೂರು ಉತ್ತರ ಬಿಜೆಪಿ ಒಬಿಸಿ ಮೋರ್ಚಾದ ಉಪಾಧ್ಯಕ್ಷ ನವೀನ್‌ಚಂದ್ರ ಪೂಜಾರಿ, ಅಮೃತಾ ವಿದ್ಯಾ ಟ್ರಸ್ಟ್ ನ ಟ್ರಸ್ಟಿ ಸಿ.ಕೆ. ಪದ್ಮನಾಭ ಉಪಸ್ಥಿತರಿದ್ದರು.
ನರ್ಸರಿ ಸ್ಕೂಲ್‌ನ ಮುಖ್ಯ ಶಿಕ್ಷಕಿ ಸಪ್ನಾ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಆ್ಯಂಟನಿರಾಜ್ ಸ್ವಾಗತಿಸಿದರು. ಶಿಕ್ಷಕಿ ಸುನಿತಾ ಹರೀಶ್ ವಂದಿಸಿದರು. ಶಿಕ್ಷಕಿ ಶಿಲ್ಜಾ ಶಶಿಕುಮಾರ್ ವಿಜೇತರ ಪಟ್ಟಿ ವಾಚಿಸಿದರು.ಶಿಕ್ಷಕಿ ಅನಿತಾ ಶಾಂತಕುಮಾರ್ ಕಾರ್ಯಕ್ರಮ ನಿರೂಪಿಸಿದರು.