×
Ad

ರಾಷ್ಟ್ರಪತಿಯಿಂದ ವಾಜಪೇಯಿ ಭಾವಚಿತ್ರ ಅನಾವರಣ

Update: 2019-02-12 23:24 IST

ಹೊಸದಿಲ್ಲಿ, ಫೆ. 12: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ ಆಳೆತ್ತರದ ಭಾವಚಿತ್ರ ಅನಾವರಣಗೊಳಿಸಿದರು. ಹಲವು ಸಂಕೀರ್ಣ ಸನ್ನಿವೇಶಗಳಲ್ಲಿ ತಾಳ್ಮೆ ಅನುಸರಿಸಿದ ಬಿಜೆಪಿಯ ಹಿರಿಯ ನಾಯಕರಾದ ವಾಜಪೇಯಿ ಅವರು ಅನುಕರಣೀಯ ಎಂದು ಅವರು ಹೇಳಿದರು.

ವಾಜಪೇಯಿ ಅವರನ್ನು ‘ಸಾರ್ವಜನಿಕ ಜೀವನದ ಶಾಲೆ’ ಎಂದು ಬಣ್ಣಿಸಿದ ಅವರು, ವಾಜಪೇಯಿ ಅವರು ಹೆದ್ದಾರಿ, ಮಾಹಿತಿ ತಂತ್ರಜ್ಞಾನ ಹಾಗೂ ಟೆಲಿಕಾಂ ವಲಯಗಳನ್ನು ಸುಧಾರಣೆ ಮಾಡುವ ಮೂಲಕ ಸಂಪರ್ಕವನ್ನು ತ್ವರಿತಗೊಳಿಸುವ ದಿಶೆಯಲ್ಲಿ ಕಾರ್ಯ ನಿರ್ವಹಿಸಿದ್ದರು ಎಂದು ಹೇಳಿದರು. ವಾಜಪೇಯಿ ಅವರ ಭಾವಚಿತ್ರ ರಚಿಸಿದ ಕೃಷ್ಣ ಕನ್ನೈ ಅವರನ್ನು ಈ ಸಂದರ್ಭ ರಾಷ್ಟ್ರಪತಿ ಅವರು ಗೌರವಿಸಿದರು. ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಅವರ ಮೌನವೇ ಸಂದೇಶ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News