×
Ad

ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ರಾಜೀವ್ ಸಕ್ಸೇನಾ ಜಾಮೀನು ಮನವಿ ಆದೇಶ ಕಾಯ್ದಿರಿಸಿದ ದಿಲ್ಲಿ ಹೈಕೋರ್ಟ್

Update: 2019-02-12 23:28 IST

ಹೊಸದಿಲ್ಲಿ, ಫೆ. 12: ಅಗಸ್ಟಾ ವೆಸ್ಟ್‌ಲ್ಯಾಂಡ್‌ನ ಸಹ ಆರೋಪಿ ರಾಜೀವ್ ಸಕ್ಸೇನಾ ಅವರ ಜಾಮೀನು ಅರ್ಜಿಯ ಆದೇಶವನ್ನು ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ಕಾಯ್ದಿರಿಸಿದೆ. ಜಾರಿ ನಿರ್ದೇಶನಾಲಯದ ರಿಮಾಂಡ್ ಇಂದು ಅಂತ್ಯಗೊಂಡಿದ್ದು, ಸಕ್ಸೇನಾ ಅವರನ್ನು ಪಾಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಆದರೆ, ರಿಮಾಂಡ್ ವಿಸ್ತರಿಸುವ ಅಗತ್ಯತೆ ಇಲ್ಲ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿತು. ನಾನು ತನಿಖಾ ಸಂಸ್ಥೆಗೆ ಸಹಕರಿಸುತ್ತಿದ್ದೇನೆ. ತನಿಖೆಗೆ ಅಗತ್ಯ ಇರುವ ಮಾಹಿತಿಗಳನ್ನು ಒದಗಿಸುತ್ತಿದ್ದೇನೆ. ಆದುದರಿಂದ ಇನ್ನಷ್ಟು ಕಸ್ಟಡಿ ವಿಚಾರಣೆ ಅಗತ್ಯ ಇಲ್ಲ ಎಂದು ರಾಜೀವ್ ಸಕ್ಸೇನಾ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ವೈದ್ಯಕೀಯ ನೆಲೆಯಲ್ಲಿ ಜಾಮೀನು ಕೋರಿರುವುದಾಗಿ ಸಕ್ಸೇನಾ ಅವರ ಪರ ವಕೀಲ ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News