×
Ad

ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರಿಗೆ ಪ್ರಹ್ಲಾದ್ ಮೋದಿ ಭೇಟಿ

Update: 2019-02-13 20:18 IST

ಉಡುಪಿ, ಫೆ.13: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಹಾಗೂ ರೇಷನ್ ಅಂಗಡಿ ಡೀಲರ್‌ಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾಗಿರುವ ಪ್ರಹ್ಲಾದ್ ಮೋದಿ ಅವರು ಇಂದು ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಕೊಲ್ಲೂರಿನ ಶ್ರೀಮುಕಾಂಬಿಕಾ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಪ್ರಹ್ಲಾದ್ ಮೋದಿ, ಮಠದ ಗೋಶಾಲೆಗೆ ಹಾಗೂ ಹಿಂದಿನ ಯತಿಗಳ ಸಮಾಧಿಗಳಿರುವ ಬೃಂದಾವನಕ್ಕೆ ಭೇಟಿ ನೀಡಿ ಈ ಬಗ್ಗೆ ಮಾಹಿತಿಗಳನ್ನು ಕೇಳಿ ಪಡೆದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾನು ಇದೇ ಮೊದಲ ಬಾರಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದರು. ಇದೊಂದು ಧಾರ್ಮಿಕ ಉದ್ದೇಶದ ಭೇಟಿಯಾಗಿದೆ ಎಂದವರು ಸ್ಪಷ್ಟಪಡಿಸಿದರು.

ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಉತ್ತಮವಾಗಿ ಕೆಲಸ ಮಾಡಿದೆ. ದೇಶದ ಜನತೆ ಎನ್‌ಡಿಎ ಕಾರ್ಯವೈಖರಿಗೆ ಖುಷಿಯಾಗಿದ್ದಾರೆ. ದೇಶದ ಜನತೆ ಸಂತುಷ್ಟವಾಗಿದೆ ಎಂದ ಪ್ರಹ್ಲಾದ್ ಮೋದಿ, ಭಾರತವನ್ನು ವಿಶ್ವವೇ ಗುರುತಿಸುವಂತೆ ಮಾಡಿದ್ದು ಎನ್‌ಡಿಎ ಸರಕಾರದ ಸಾಧನೆಯಾಗಿದೆ. ಸ್ವಾತಂತ್ರ್ಯ ನಂತರ ಇದು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಮತ್ತೊಮ್ಮೆ ಮೋದಿಯೇ ಪ್ರಧಾನಿಯಾಗಲಿ ಎಂದು ಜನತೆ ಬಯಸುತ್ತಿದ್ದಾರೆ ಎಂದರು.

ನಾನು ಯಾವತ್ತೂ ಸಹೋದರ ಮೋದಿಯನ್ನು ಟೀಕಿಸಿರಲಿಲ್ಲ. ಈ ಕುರಿತ ವರದಿಗಳೆಲ್ಲಾ ಕೇವಲ ಊಹಾಪೋಹ. ಕೇಂದ್ರ ಸರಕಾರದ ಆರ್ಥಿಕ ನೀತಿ ಯನ್ನು ದೇಶದ ಜನ ಖುಷಿಯಿಂದ ಸ್ವೀಕರಿಸಿದ್ದಾರೆ. ನಾನು ಮಮತಾ ಬ್ಯಾನರ್ಜಿ ಯನ್ನು ಬೆಂಬಲಿಸಿದ್ದೆ ಅನ್ನೋದೆಲ್ಲಾ ಸುಳ್ಳು, ಸಹೋದರ ನರೇಂದ್ರ ಮೋದಿ ಯನ್ನು ಬಿಟ್ಟು ನಾನ್ಯಾಕೆ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಲಿ?. ಮಮತಾ ಬ್ಯಾನರ್ಜಿಯಲ್ಲಿ ಅಂತಾದ್ದೇನಿದೆ ಎಂದ ಅವರು,ಮೋದಿ ಸಹೋದರ ಮಮತಾ ಬೆಂಬಲಿಗ ಎಂಬ ಟೀಕೆಗೆ ಪ್ರಹ್ಲಾದ ಮೋದಿ ಉತ್ತರಿಸಿದರು.

ಪ್ರಿಯಾಂಕ ಬಗ್ಗೆ ಲೇವಡಿ: ದೇಶದಲ್ಲಿ ಬಹಳಷ್ಟು ಪ್ರಿಯಾಂಕಾಗಳಿದ್ದಾರೆ. ಒಬ್ಬ ಪ್ರಿಯಾಂಕಾ ಬಂದರೆ ಏನಾಗುತ್ತೆ? ಎಂದು ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದ ಬಗ್ಗೆ ಅವರು ಲೇವಡಿ ಮಾಡಿದರು.

ದೇಶದಲ್ಲಿ ಬಹಳಷ್ಟು ಪ್ರಿಯಾಂಕಾಗಳಿದ್ದಾರೆ. ಒಬ್ಬ ಪ್ರಿಯಾಂಕಾ ಬಂದರೆ ಏನಾಗುತ್ತೆ? ಎಂದು ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದ ಬಗ್ಗೆ ಅವರು ಲೇವಡಿ ಮಾಡಿದರು. ಕೇಂದ್ರ ಸರಕಾರ ರೈತರಿಗೆ ಬಜೆಟ್‌ನಲ್ಲಿ ಅನೇಕ ಕೊಡುಗೆಗಳನ್ನು ನೀಡಿದೆ. ದಿನಕ್ಕೆ ಹದಿನೇಳು ರೂ.ವಷ್ಟೇ ನೀಡಿದೆ ಅಂತಾರೆ. ಅಷ್ಟಾದ್ರೂ ಕೊಟ್ಟಿತಲ್ಲ. ಈ ಹಿಂದೆ ಕೇಂದ್ರದಲ್ಲಿ ಅಧಿಕಾರ ನಡೆಸುವಾಗ ಕಾಂಗ್ರೆಸಿಗರಿಗೆ ರೈತರ ನೆನಪಾಗಿಲ್ಲ. ಈಗ ಕೃಷ್ಣನಿಗೆ ಸುಧಾಮ ಅವಲಕ್ಕಿ ಕೊಟ್ಟಂತೆ ರೈತರಿಗೆ ಈ ಸರಕಾರ ಅಲ್ಪವಾದರೂ ಕೊಟ್ಟಿತಲ್ಲ, ಅದೇ ಖುಷಿ ಎಂದು ಕರಾವಳಿ ಜಿಲ್ಲೆಗಳಲ್ಲಿ ತೀರ್ಥಯಾತ್ರೆ ನಡೆಸುತ್ತಿರುವ ಪ್ರಹ್ಲಾದ್ ಮೋದಿ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News