ಫೆ.15 ವೆಲ್‌ಫೇರ್ ಎಸೋಸಿಯೆಶನ್ ವತಿಯಿಂದ ವಿವಿಧ ಸೌಲಭ್ಯ ವಿತರಣೆ

Update: 2019-02-13 16:02 GMT

ಉಡುಪಿ, ಫೆ.13: ಸ್ಥಳೀಯ ಮುಸ್ಲಿಂ ವೆಲ್‌ಫೇರ್ ಎಸೋಸಿಯೆಶನ್ ವತಿಯಿಂದ 2018-2019ನೇ ವರ್ಷದಲ್ಲಿ ಜಮೆಯಾದ 7,99,390 ರೂ. ಝಕಾತ್ ಮೊಬಲಗಿನಿಂದ ಉಡುಪಿ ಆಸುಪಾಸಿನ 7 ಮಂದಿ ಫಲಾನುಭವಿ ಗಳಿಗೆ 4 ಆಪೆ ಸಿಟಿ ರಿಕ್ಷಾ ಮತ್ತು ಮೀನಿನ ವ್ಯಾಪಾರಿಗಳಿಗೆ 3 ಟಿವಿಎಸ್ ಮೊಪೆಡ್‌ಗಳನ್ನು ಸ್ವ-ಉದ್ಯೋಗ ಯೋಜನೆಯಡಿಯಲ್ಲಿ ವಿತರಿಸಲಾಗುವುದು.

ಇದೇ ಫೆ.15ರ ಶುಕ್ರವಾರ ಉಡುಪಿ ಜಾಮಿಯ ಮಸೀದಿಯಲ್ಲಿ ಅಸರ್ ನಮಾಜ್ ಬಳಿಕ ಸಂಜೆ 5 ಗಂಟೆಗೆ ನಡೆಯುವ ಸರಳ ಸಮಾರಂಭದಲ್ಲಿ ಇವುಗಳನ್ನು ವಿತರಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News