ಮಣಿಪಾಲ: ಎನ್‌ಐಟಿಕೆಗೆ ಕ್ವಿಜ್‌ನಲ್ಲಿ ಅಗ್ರ ಪ್ರಶಸ್ತಿ
ಉಡುಪಿ, ಫೆ.13: ಸುರತ್ಕಲ್ ಎನ್‌ಐಟಿಕೆಯ ಅದಿತಿ ಗುಪ್ತಾ ಹಾಗೂ ಅಮಲ್ ಮೋಹನ್ ಅವರನ್ನೊಳಗೊಂಡ ತಂಡ, ಮಣಿಪಾಲದ ಟ್ಯಾಪ್ಮಿಯಲ್ಲಿ ನಡೆದ ಟಾಟಾ ಕ್ರೂಸಿಬಲ್ ಕ್ಯಾಂಪಸ್ ಕ್ವಿಜ್‌ನ 5ನೇ ಆವೃತ್ತಿಯಲ್ಲಿ ಪ್ರಾದೇಶಿಕ ಮಟ್ಟದ ಅಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಒಟ್ಟು 80 ತಂಡಗಳು ಪಾಲ್ಗೊಂಡಿದ್ದ ಸ್ಪರ್ಧೆಯ ಕೊನೆಯ ಸುತ್ತಿನಲ್ಲಿ ವಿಜೇತರಾಗಿ ಹೊರಹೊಮ್ಮಿದ ಅದಿತಿ ಗುಪ್ತಾ ಹಾಗೂ ಅಮಲ್ ಮೋಹನ್ ಪ್ರಶಸ್ತಿಯೊಂದಿಗೆ 75 ಸಾವಿರ ರೂ. ನಗದು ಬಹುಮಾನವನ್ನೂ ಗೆದ್ದರಲ್ಲದೇ, ವಿಭಾಗ ಮಟ್ಟದಿಂದ ರಾಜ್ಯಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದರು. ಇದರಲ್ಲಿ ವಿಜೇತರಾದವರು ರಾಷ್ಟ್ರಮಟ್ಟದ ಫೈನಲ್‌ಗೆ ಆಯ್ಕೆಯಾಗಲಿದ್ದಾರೆ.
ಸ್ಕೂಲ್ ಆಫ್ ಕಮ್ಯುನಿಕೇಶನ್‌ನ ಪ್ರದೀಪ್ ಶ್ರೀಯಾನ್ ಹಾಗೂ ಆಯುಷ್ಮಾನ್ ಶರ್ಮಾ ಅವರು ರನ್ನರ್‌ಅಪ್ ಪ್ರಶಸ್ತಿ ಹಾಗೂ 35 ಸಾವಿರ ರೂ. ನಗದು ಬಹುಮಾನ ಗಳಿಸಿದರು.
ಸ್ಕೂಲ್ ಆಫ್ ಕಮ್ಯುನಿಕೇಶನ್‌ನ ಪ್ರದೀಪ್ ಶ್ರೀಯಾನ್ ಹಾಗೂ ಆಯುಷ್ಮಾನ್ ಶರ್ಮಾ ಅವರು ರನ್ನರ್‌ಅಪ್ ಪ್ರಶಸ್ತಿ ಹಾಗೂ 35 ಸಾವಿರ ರೂ. ನಗದು ಬಹುಮಾನ ಗಳಿಸಿದರು. ಟ್ಯಾಪ್ಮಿಯ ಸಹ ಡೀನ್ (ಶೈಕ್ಷಣಿಕ) ಪ್ರೊ. ವಿಶ್ವನಾಥ್ ಅಯ್ಯರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗಿರಿ ಬಾಲಸುಬ್ರಮಣ್ಯಂ ತಮ್ಮ ಎಂದಿನ ಶೈಲಿಯಲ್ಲಿ ರಸಪ್ರಶ್ನೆಯನ್ನು ನಡೆಸಿಕೊಟ್ಟರು ಎಂದು ಪ್ರಕಟಣೆ ತಿಳಿಸಿದೆ.