ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯವಾರು ತರಬೇತಿ
ಮಂಗಳೂರು, ಫೆ. 13: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಜಂಟಿ ಸಹಯೋಗದಲ್ಲಿ ಮಂಗಳೂರು ದಕ್ಷಿಣ ವಲಯದ ಆಯ್ದ ಸರಕಾರಿ ಶಾಲೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯವಾರು ತರಬೇತಿ ಕಾರ್ಯಾಗಾರವು ಇತ್ತೀಚೆಗೆ ವಿವಿಧ ಶಾಲೆಗಳಲ್ಲಿ ನಡೆಯಿತು.
ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮ ಪಡಿಸುವ ಸಲುವಾಗಿ ಗಣಿತ, ವಿಜ್ಞಾನ, ಇಂಗ್ಲಿಷ್ ಮತ್ತು ಸಮಾಜ ವಿಷಯಗಳ ಜೊತೆಗೆ ಪ್ರೇರಣಾ ತರಗತಿಯನ್ನು ನುರಿತ ಶಿಕ್ಷಕರಿಂದ ನಡೆಸಲಾಯಿತು.
ಮಂಗಳೂರು ದಕ್ಷಿಣ ವಲಯದ ಸರಕಾರಿ ಪ್ರೌಢ ಶಾಲೆಗಳಾದ ಪಾವೂರು, ನ್ಯೂಪಡ್ಪು, ಅಂಬ್ಲಮೊಗರು, ಪೆರ್ಮನ್ನೂರು, ದೇರಳಕಟ್ಟೆ, ಕಣ್ಣೂರು, ಅನುದಾನಿತ ಪ್ರೌಢ ಶಾಲೆಗಳಾದ ರಾಮಕೃಷ್ಣ ಹರೇಕಳ, ಸೈಂಟ್ ಜೋಸೆಫ್ ಕಂಕನಾಡಿ, ಸಯ್ಯದ್ ಮದನಿ ಹಳೆಕೋಟೆ, ಆದರ್ಶ ಭಾರತಿ ಬಜಾಲ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದರು.
ಎಲ್ಲಾ ಕೇಂದ್ರಗಳಲ್ಲಿ ಪ್ರೇರಣಾ ತರಗತಿಯನ್ನು ಟ್ಯಾಲೆಂಟ್ ಸಲಹೆಗಾರ ರಫೀಕ್ ಮಾಸ್ಟರ್ ನಡೆಸಿದರು.
ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಗಾಯತ್ರಿ ಸರಕಾರಿ ಪ್ರೌಢ ಶಾಲೆ ಮೂಡುಶೆಡ್ಡೆ, ದೇವಪ್ಪ ಸರಕಾರಿ ಪ್ರೌಢಶಾಲೆ ಸೋಮೇಶ್ವರ ಉಚ್ಚಿಲ, ಕವಿತಾ ಸರಕಾರಿ ಪ್ರೌಢ ಶಾಲೆ ಮೇಲಂಗಡಿ, ವಿನಯ ಭಾರತ್ ಪ್ರೌಢ ಶಾಲೆ ಉಳ್ಳಾಲ, ದೇವಕಿ ಸರಕಾರಿ ಪ್ರೌಢ ಶಾಲೆ ಪೆರ್ಮನ್ನೂರು, ವಿಜಯ ಕುಮಾರಿ ನೇತಾಜಿ ಪ್ರೌಢ ಶಾಲೆ ದೇರಳಕಟ್ಟೆ, ನಯನ ನೇತಾಜಿ ಪ್ರೌಢ ಶಾಲೆ ದೇರಳಕಟ್ಟೆ, ಕರುಣ ಎಸ್ ಸರಕಾರಿ ಪ್ರೌಢಶಾಲೆ ಪಾವೂರು, ಸುಧಾ ಸರಕಾರಿ ಪ್ರೌಢ ಶಾಲೆ ಸೋಮೇಶ್ವರ ಉಚ್ಚಿಲ, ಜೊವಿತ ಸರಕಾರಿ ಪ್ರೌಢ ಶಾಲೆ ನ್ಯೂಪಡ್ಪು, ಸರೋಜಿನಿ ಸರಕಾರಿ ಪ್ರೌಢ ಶಾಲೆ ಪೆರ್ಮನ್ನೂರು, ರಘುನಾಥ್ ಕಿಟ್ಟೆಲ್ ಪ್ರೌಢ ಶಾಲೆ ಗೋರಿಗುಡ್ಡೆ, ಪ್ರಮೀಳ ಸರಕಾರಿ ಪ್ರೌಢಶಾಲೆ ಪಾವೂರು, ಶೋಭಾ ಬಾಯಿ ಎಂ ಸರಕಾರಿ ಪ್ರೌಢ ಶಾಲೆ ಪಾವೂರು ಭಾಗವಹಿಸಿದ್ದರು.
ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಕ್ಷೇತ್ರ ಸಮನ್ವಯಾಧಿಕಾರಿ ಡಾ. ಪ್ರಶಾಂತ್, ಶಿಕ್ಷಣ ಸಂಯೋಜಕಿ ಜ್ಯೋತಿ, ಬಿ.ಆರ್.ಪಿ ತುಳಸಿ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಟ್ಯಾಲೆಂಟ್ ಅಧ್ಯಕ್ಷ ರಿಯಾಝ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು, ಸದಸ್ಯ ನಕಾಶ್ ಬಾಂಬಿಲ ಕಾರ್ಯಕ್ರಮದಲ್ಲಿ ಸಹಕರಿಸಿದ್ದರು.