ಹಿರಿಯ ಉದ್ಯಮಿ ಜಿ. ನಾಗೇಶ ಪೈ ನಿಧನ

Update: 2019-02-13 17:19 GMT

ಮೂಡುಬಿದಿರೆ, ಫೆ. 13: ಹಿರಿಯ ತೈಲ ಉದ್ಯಮಿ, ಪ್ರಕಾಶ್ ಮಿಲ್ಸ್ ಮಾಲಕ ಜಿ. ನಾಗೇಶ ಪೈ (88) ಹೃದಯಾಘಾತದಿಂದ ಬುಧವಾರ ನಿಧನ ಹೊಂದಿದರು. ಅವರು ಮೂಡುಬಿದಿರೆ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಅವರು ಮೂಡುಬಿದಿರೆಯ ಮೆ.ಜಿ.ನಾಗೇಶ ಪೈ ಸಂಸ್ಥೆಯನ್ನು 1954ರಲ್ಲಿ ಆರಂಭಿಸಿ 1964ರಲ್ಲಿ ತೈಲೋದ್ಯಮದ ಪ್ರಕಾಶ್ ಮಿಲ್ಸ್ ಆರಂಭಿಸಿ ಮುನ್ನಡೆ ಸುತ್ತಿದ್ದರು. ಮೂಡುಬಿದಿರೆ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಮೊಕ್ತೇಸರರರಾಗಿ, ಜಿ.ಎಸ್.ಬಿ.ಸೇವಾ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಅರುವತ್ತರ ದಶಕದಲ್ಲಿ ಮೂಡುಬಿದಿರೆಯ ಅಭಿವೃದ್ಧಿ ಕಾರ್ಯಗಳಲ್ಲಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಹಿರಿಯ ಸಹೋದರ ಜಿ.ವಾಸುದೇವ ಪೈ ಅವರ ಸೇವಾ ಕಾರ್ಯಗಳಿಗೆ ಸಹಕಾರ ನೀಡಿದ್ದರು.

ಪ್ರಸ್ತುತ ಜಿ.ವಿ.ಪೈ ಆಸ್ಪತ್ರೆಯ ಆಡಳಿತ ಮಂಡಳಿ ಟ್ರಸ್ಟಿಯಾಗಿದ್ದ ಅವರು ಮೂಡುಬಿದಿರೆ ರೋಟರಿಯ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ, ರೋಟರಿ ಎಜುಕೇಶನ್ ಸೊಸೈಟಿಯ ಸ್ಥಾಪಕ ಕೊಶಾಧಿಕಾರಿಯಾಗಿ, ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News