ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ಸಕ್ಸೇನಾಗೆ ಮಧ್ಯಂತರ ಜಾಮೀನು

Update: 2019-02-14 15:54 GMT

ಹೊಸದಿಲ್ಲಿ, ಫೆ.14: ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಪ್ರಕರಣದಲ್ಲಿ ಆರೋಪಿಯಾಗಿರುವ ಉದ್ಯಮಿ ರಾಜೀವ್ ಸಕ್ಸೇನಾಗೆ ನ್ಯಾಯಾಲಯ ಗುರುವಾರ 7 ದಿನಗಳ ಮಧ್ಯಂತರ ಜಾಮೀನು ಮಂಜೂರುಗೊಳಿಸಿದೆ. 5 ಲಕ್ಷ ರೂ. ಮೊತ್ತದ ಎರಡು ಜಾಮೀನು ಬಾಂಡ್ ಒದಗಿಸುವಂತೆ ನ್ಯಾಯಾಲಯ ಸೂಚಿಸಿದೆ.

ದುಬೈಯಲ್ಲಿದ್ದ ಸಕ್ಸೇನಾ ಹಾಗೂ ದೀಪಕ್ ತಲ್ವಾರ್‌ರನ್ನು ಜನವರಿ 31ರಂದು ಭಾರತಕ್ಕೆ ಗಡೀಪಾರು ಮಾಡಿದ ಬಳಿಕ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದು ಅಂದಿನಿಂದ ಸಕ್ಸೇನಾ ಇಡಿ ಕಸ್ಟಡಿಯಲ್ಲಿದ್ದಾರೆ. ಸಕ್ಸೇನಾ ವೈದ್ಯಕೀಯ ಕಾರಣ ಮುಂದಿಟ್ಟು ಜಾಮೀನು ಕೋರಿರುವ ಕಾರಣ ಮತ್ತು ಅವರು ತನಿಖೆಗೆ ಸಹಕರಿಸುತ್ತಿರುವುದರಿಂದ ಇಡಿ ಅಧಿಕಾರಿಗಳು ಜಾಮೀನು ಅರ್ಜಿಗೆ ವಿರೋಧ ಸೂಚಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ 7 ದಿನ ಮಧ್ಯಂತರ ಜಾಮೀನು ಮಂಜೂರುಗೊಳಿಸಿರುವ ನ್ಯಾಯಾಲಯ, ಅವರ ಆರೋಗ್ಯಸ್ಥಿತಿಯ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿ ವಿಚಾರಣೆಯನ್ನು ಫೆ.22ಕ್ಕೆ ನಿಗದಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News