ಪಾಣೆಮಂಗಳೂರು: ಗೂಡಿನಬಳಿ ಸಮೀಪ ಗುಡ್ಡಕ್ಕೆ ಬೆಂಕಿ

Update: 2019-02-14 16:11 GMT

ಬಂಟ್ವಾಳ, ಫೆ. 14: ಪಾಣೆಮಂಗಳೂರು ಗೂಡಿನಬಳಿ ಸಮೀಪ ಗುಡ್ಡಕ್ಕೆ ಗುರುವಾರ ಸಂಜೆಯ ವೇಳೆ ಬೆಂಕಿ ಆಕಸ್ಮಿಕ ಸಂಭವಿಸಿದೆ.

ವಾತಾವರಣದ ತಾಪಮಾನ ವೈಪರೀತ್ಯದಿಂದ ಅಲ್ಲಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸುತ್ತಿದ್ದು, ಗೂಡಿನಬಳಿಯಲ್ಲಿ ಬೆಂಕಿ ಕಾಣಿಸಲು ಇದೇ ಕಾರಣವೋ ಅಥವಾ ಯಾರಾದರೂ ಬೆಂಕಿ ಹಚ್ಚಿದ್ದಾರೋ ಎಂಬುದು ಇನ್ನೂ ತಿಳಿದುಬಂದಿಲ್ಲ. 

ರಸ್ತೆಯೂ ಇಲ್ಲದ ಪ್ರದೇಶಕ್ಕೆ ಅಗ್ನಿಶಾಮಕ ದಳ ಇಲಾಖೆ ಸಿಬ್ಬಂದಿ ಹಾಗೂ ಬಂಟ್ವಾಳ ಪೊಲೀಸರು ಧಾವಿಸಿದ್ದು, ಬೆಂಕಿ ನಂದಿಸಲು ಕ್ರಮ ಕೈಗೊಂಡರು. ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News