×
Ad

ಜ್ಯುವೆಲ್ಲರಿಗೆ ನುಗ್ಗಿ ಸೊತ್ತು ಕಳವು

Update: 2019-02-14 22:15 IST

ಶಂಕರನಾರಾಯಣ, ಫೆ.14: ಅಲ್ಬಾಡಿ ಗ್ರಾಮದ ಪರಿಶ್ರಮ ಕಾಂಪ್ಲೆಕ್ಸ್‌ನಲ್ಲಿ ರುವ ಶರಣ್ಯ ಜುವೆಲ್ಲರಿ ಅಂಗಡಿಗೆ ಫೆ.13ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಆಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ.

ಅಂಗಡಿಯ ಶಟರ್ ಹಾಗೂ ಬೀಗ ಮುರಿದು ಒಳನುಗ್ಗಿದ ಕಳ್ಳರು, 24,000 ರೂ. ಮೌಲ್ಯದ ಬೆಳ್ಳಿಯ ಅಭರಣ, ರೋಲ್ಡ್‌ಗೋಲ್ಡ್ ಆಭರಣ, ಬೆಳ್ಳಿಯ ಕಾಲು ದೀಪ ಸೇರಿದಂತೆ ಹಲವು ಸೊತ್ತುಗಳನ್ನು ಕಳವು ಮಾಡಿ ಕೊಂಡು ಹೋಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News