ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ

Update: 2019-02-14 16:52 GMT

ಉಡುಪಿ, ಫೆ.14: ಜಿಲ್ಲೆಯ ಉದ್ಯಮಶೀಲ ಆಕಾಂಕ್ಷಿಗಳು, ನಿರುದ್ಯೋಗಿ ಯುವಕ ಯುವತಿಯರು ಹಾಗೂ ಜವಳಿ ಆಧಾರಿತ ಕೈಗಾರಿಕಾ ಘಟಕಗಳಾದ ಕಾಟನ್ ಜಿನ್ನಿಂಗ್, ಪ್ರಿಂಟಿಂಗ್, ಗಾರ್ಮೆಂಟ್ಸ್, ಟೆಕ್ನಿಕಲ್ ಟೆಕ್ಸ್‌ಟೈಲ್ಸ್, ಜವಳಿ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲು ಇಚ್ಚಿಸುವ ಉದ್ಯಮಶೀಲರಿಗೆ ಇಲಾಖಾ ಯೋಜನೆಗಳ ಕುರಿತು ಜಿಲ್ಲೆಯಲ್ಲಿ ಎರಡು ದಿನಗಳ ಉದ್ಯಮ ಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಮುಂದಿನ ತಿಂಗಳು ಏರ್ಪಡಿಸ ಲಾಗುವುದು.

ಆಸಕ್ತ ಉದ್ಯಮಶೀಲರು ಫೆ.22ರೊಳಗೆ ಮಣಿಪಾಲದಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ಈಮೇಲ್ ನ್ನು adhtudupi@gmail.com  ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ವಿವರಗಳಿಗೆ ದೂರವಾಣಿ:0820-2574963 ಅಥವಾ ಸಹಾಯಕ ನಿರ್ದೇಶಕರನ್ನು (9449250525) ಸಂಪರ್ಕಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News