ಬೀಜಿಂಗ್: ಅಮೆರಿಕ-ಚೀನಾ ವ್ಯಾಪಾರ ಮಾತುಕತೆ ಆರಂಭ

Update: 2019-02-14 17:05 GMT

ಬೀಜಿಂಗ್, ಫೆ. 14: ಅಮೆರಿಕ ಮತ್ತು ಚೀನಾ ನಡುವಿನ ಎರಡು ದಿನಗಳ ಉನ್ನತ ಮಟ್ಟದ ವ್ಯಾಪಾರ ಮಾತುಕತೆ ಗುರುವಾರ ಬೀಜಿಂಗ್‌ ನಲ್ಲಿ ಆರಂಭಗೊಂಡಿದೆ.

ಚೀನಾದೊಂದಿಗಿನ ವ್ಯಾಪಾರ ಸಮರವನ್ನು ತೀವ್ರಗೊಳಿಸಬೇಕೇ, ಬೇಡವೇ ಎನ್ನುವುದನ್ನು ಈ ಮಾತುಕತೆಗಳ ಫಲಿತಾಂಶದ ಆಧಾರದಲ್ಲಿ ನಾನು ನಿರ್ಧರಿಸುತ್ತೇನೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಬೀಜಿಂಗ್ ಮಾತುಕತೆಯಲ್ಲಿ ಸಾಧಿಸುವ ಪ್ರಗತಿಯನ್ನು ಆಧರಿಸಿ, ಮಾರ್ಚ್ 1ರ ಬಳಿಕವೂ ವ್ಯಾಪಾರ ರಾಜಿ ಒಪ್ಪಂದವನ್ನು ಮುಂದುವರಿಸಲು ನಾನು ಮುಕ್ತ ಮನೋಭಾವ ಹೊಂದಿದ್ದೇನೆ ಎಂಬ ಇಂಗಿತವನ್ನು ಟ್ರಂಪ್ ಈ ವಾರ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.

ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲಿತೀಝರ್ ಮತ್ತು ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ ಚೀನಾದ ಆರ್ಥಿಕ ಪರಿಣತ ಲಿಯು ಹೆ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಕಳೆದ ತಿಂಗಳು ವಾಶಿಂಗ್ಟನ್‌ನಲ್ಲಿ ಗಳಿಸಿದ ಅಭಿವೃದ್ಧಿಯನ್ನು ಮುಂದುವರಿಸಿಕೊಂಡು ಹೋಗಲು ಅವರು ಯತ್ನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News