ಇರಾನ್: ಸೈನಿಕರ ಬಸ್ ಮೇಲೆ ಆತ್ಮಹತ್ಯಾ ದಾಳಿ; 27 ಸಾವು

Update: 2019-02-14 17:07 GMT

ಟೆಹರಾನ್ (ಇರಾನ್), ಫೆ. 14: ಇರಾನ್‌ನ ರೆವಲೂಶನರಿ ಗಾರ್ಡ್ಸ್ ಸೈನಿಕರು ಪ್ರಯಾಣಿಸುತ್ತಿದ್ದ ಬಸ್ಸೊಂದರ ಮೇಲೆ ಬುಧವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ 27 ಮಂದಿ ಮೃತಪಟ್ಟಿದ್ದಾರೆ.

‘‘ರೆವಲೂಶನರಿ ಗಾರ್ಡ್ಸ್ ಕಾರ್ಪ್ಸ್ ಸಿಬ್ಬಂದಿಯ ಬಸ್‌ನ ಮೇಲೆ ಖಾಶ್-ಝಹೇದನ್ ರಸ್ತೆಯಲ್ಲಿ ಆತ್ಮಹತ್ಯಾ ದಾಳಿ ನಡೆಯಿತು’’ ಎಂದು ‘ಇರ್ನಾ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸ್ಫೋಟಕಗಳಿಂದ ತುಂಬಿದ್ದ ಕಾರೊಂದು ಸೈನಿಕರಿದ್ದ ಬಸ್‌ನ ಪಕ್ಕ ಸ್ಫೋಟಿಸಿದಾಗ ಹಲವಾರು ಮಂದಿ ಮೃತಪಟ್ಟರು ಹಾಗೂ ಗಾಯಗೊಂಡರು.

ಸಿಸ್ತಾನ್ ಪ್ರಾಂತದಲ್ಲಿ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News