ರನ್‌ವೇಯಲ್ಲಿ ವಿಮಾನದ ರೆಕ್ಕೆ ಬಿದ್ದಿತ್ತು: ಎಚ್‌ಎಎಲ್ ಸ್ಥಿತಿ ಬಗ್ಗೆ ಪ್ರಶ್ನಿಸಿದ ವಿ.ಕೆ. ಸಿಂಗ್

Update: 2019-02-14 17:37 GMT

ಪುಣೆ, ಫೆ. 14: ರಫೇಲ್ ಒಪ್ಪಂದದಲ್ಲಿ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್‌ಗೆ ಆಫ್‌ಸೆಟ್ ಗುತ್ತಿಗೆ ನೀಡಲು ಮೋದಿ ಸರಕಾರ ನಿರಾಕರಿಸಿದೆ ಎಂಬ ಕಾಂಗ್ರೆಸ್‌ನ ಪ್ರತಿಪಾದನೆಯ ನಡುವೆ, ಎಚ್‌ಎಎಲ್‌ನ ‘ಸಾಮರ್ಥ್ಯ ಹಾಗೂ ಸ್ಥಿತಿ’ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ. ಸಿಂಗ್ ಬುಧವಾರ ಪ್ರಶ್ನೆ ಎತ್ತಿದ್ದಾರೆ.

ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಕೆ. ಸಿಂಗ್, ರಫೇಲ್ ಒಪ್ಪಂದವನ್ನು ಸಮರ್ಥಿಸಿಕೊಂಡರು. ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಭಾರತೀಯ ವಾಯು ಪಡೆಯ ಸಾಮರ್ಥ್ಯವನ್ನು ವೃದ್ಧಿಸಲು ಅನಿವಾರ್ಯವಾಗಿತ್ತು ಎಂದು ಅವರು ಹೇಳಿದ್ದಾರೆ. ‘‘ಎಚ್‌ಎಎಲ್‌ನ ಪರಿಸ್ಥಿತಿ ಬಗ್ಗೆ ನೋಡಿ. ನಮ್ಮ ಇಬ್ಬರು ಪೈಲೆಟ್‌ಗಳು ಮೃತಪಟ್ಟಿದ್ದಾರೆ. ಹೇಳಲು ಬೇಸರವಾಗುತ್ತದೆ. ಆದರೆ, ಎಚ್‌ಎಎಲ್ ಮೂರುವರೆ ವರ್ಷಗಳ ಹಿಂದಿನ ತಂತ್ರಜ್ಞಾನವನ್ನು ಈಗಲೂ ಅನುಸರಿಸುತ್ತಿದೆ. ವಿಮಾನಗಳ ರೆಕ್ಕೆ ರನ್‌ವೇಯಲ್ಲೇ ಬೀಳುತ್ತದೆ. ಇನ್ನೊಂದೆಡೆಯಲ್ಲಿ ನಾವು ಎಚ್‌ಎಎಲ್‌ಗೆ ರಫೇಲ್ ನಿರ್ಮಾಣ ಕೆಲಸ ಸಿಕ್ಕಿಲ್ಲ ಎಂದು ಹೇಳುತ್ತಿದ್ದೇವೆ.’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News