ಸಚಿವ ಸ್ಥಾನ ತೊರೆಯಲಿರುವ ರಾಜ್ ಭರ್: ಆದಿತ್ಯನಾಥ್ ಸರಕಾರಕ್ಕೆ ಹಿನ್ನಡೆ

Update: 2019-02-14 17:47 GMT

ಲಕ್ನೋ, ಫೆ. 14: ನಾನು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಅಧಿಕಾರವನ್ನು ಮುಖ್ಯಮಂತ್ರಿ ಆದಿತ್ಯನಾಥ್‌ ಗೆ ಹಸ್ತಾಂತರಿಸಲಿದ್ದೇನೆ ಎಂದು ಉತ್ತರಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್ ‌ಭರ್ ಗುರುವಾರ ಹೇಳಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೊಂದಿಗೆ ರಾಜ್‌ಭರ್ ಅವರ ಸುಹೆಲ್‌ದೇವ್ ಭಾರತೀಯ ಸಮಾಜ ಪಕ್ಷ ಮೈತ್ರಿ ಮಾಡಿಕೊಂಡಿದೆ. ವಿಧಾನ ಸಭೆಯಲ್ಲಿ ಈ ಪಕ್ಷದ ನಾಲ್ವರು ಶಾಸಕರು ಇದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗಾಗಿ ಎಸ್‌ಪಿ ಹಾಗೂ ಬಿಎಸ್‌ಪಿಯೊಂದಿಗೆ ಮೈತ್ರಿಮಾಡಿಕೊಳ್ಳಲು ತನ್ನ ಪಕ್ಷ ಮುಕ್ತವಾಗಿದೆ ಎಂದು ಘೋಷಣೆ ಮಾಡಿದ ಕೆಲವು ದಿನಗಳ ಬಳಿಕ ರಾಜ್‌ಭರ್ ಹೀಗೆ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜ್‌ಭರ್ ಅವರು ಬಿಜೆಪಿ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದಾರೆ.

ಆಡಳಿತದ ಬಗ್ಗೆ ಮಾತನಾಡುವಾಗ ಬಿಜೆಪಿ ಮಸೀದಿ ಹಾಗೂ ದೇವಾಲಯಗಳನ್ನು ಎಳೆದು ತರುತ್ತದೆ. ಉತ್ತರಪ್ರದೇಶ ಸರಕಾರದ ರಾಜ್ಯದ ಸ್ಥಳಗಳಿಗೆ ಮರು ನಾಮಕರಣ ಮಾಡುವ ಮುನ್ನ ನಿಮ್ಮ ಹೆಸರುಗಳನ್ನು ಬದಲಾಯಿಸಿಕೊಳ್ಳಿ ಎಂದು ಮುಸ್ಲಿಂ ನಾಯಕರಲ್ಲಿ ಬಿಜೆಪಿ ಕೇಳಬೇಕು ಎಂದು ರಾಜ್‌ಭರ್ ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಆಡಳಿತದಲ್ಲಿ ಹಿಂದುಳಿದ ವರ್ಗದವರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ರಾಜ್‌ಭರ್ ಗುರುವಾರ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಟ್ವೀಟ್ ಮಾಡಿದ್ದರು.

‘‘ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಹಣ ನೀಡುತ್ತಿಲ್ಲ. ಸಾಮಾಜಿಕ ನ್ಯಾಯ ಸಮಿತಿ ವರದಿಯಂತೆ ಒಬಿಸಿಯವರಿಗೆ ಶೇ. 27 ಮೀಸಲಾತಿ ನೀಡುತ್ತಿಲ್ಲ. ಆದುದರಿಂದ ನಾನು ರಾಜೀನಾಮೆ ನೀಡಲಿದ್ದೇನೆ’’ ಎಂದು ರಾಜ್‌ಭರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News