ಯೋಧರ ಹತ್ಯೆ: ಕರವೇಯಿಂದ ಯೋಧರಿಗೆ ಶ್ರದ್ಧಾಂಜಲಿ
Update: 2019-02-15 20:03 IST
ಉಡುಪಿ, ಫೆ.15: ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮ ರಾದ ಭಾರತೀಯ ಸೈನಿಕರಿಗೆ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಯನ್ನು ಶುಕ್ರವಾರ ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಸಲ್ಲಿಸ ಲಾಯಿತು.
ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಮುಖಂಡರಾದ ಆಸೀಫ್, ಚಂದ್ರು ಪೂಜಾರಿ, ಸುಧೀರ್ ಪೂಜಾರಿ, ಪ್ರವೀಣ್ ಬಾರಕೂರು, ರಾಘವೇಂದ್ರ ಶೆಟ್ಟಿ, ಉಪನ್ಯಾಸಕರಾದ ಪರಮೇಶ್ವರ್, ಕೃಷ್ಣಮೂರ್ತಿ ಸಮಾಜ ಸೇವಕ ಇಕ್ಬಾಲ್ ಮನ್ನಾ ಮೊದಲಾದವರು ಉಪಸ್ಥಿತರಿದ್ದರು.