ಉಡುಪಿ: 7 ಫಲಾನುಭವಿಗಳಿಗೆ ರಿಕ್ಷಾ, ಟಿವಿಎಸ್ ಮೊಪೆಡ್ ವಿತರಣೆ

Update: 2019-02-15 14:42 GMT

ಉಡುಪಿ, ಫೆ.15: ಉಡುಪಿ ಮುಸ್ಲಿಂ ವೆಲ್‍ಫೇರ್ ಅಸೋಸಿಯೆಶನ್ ವತಿಯಿಂದ 2018-2019ನೆ ಸಾಲಿನಲ್ಲಿ ಜಮೆಯಾದ 7,99,390ರೂ. ಝಕಾತ್ ಹಣದಿಂದ ಸ್ವ-ಉದ್ಯೋಗ ಯೋಜನೆಯಡಿಯಲ್ಲಿ ಫಲಾನುಭವಿ ಗಳಿಗೆ ನಾಲ್ಕು ಆಪೆ ಸಿಟಿ ರಿಕ್ಷಾ ಮತ್ತು ಮೀನಿನ ವ್ಯಾಪಾರಿಗಳಿಗೆ ಮೂರು ಟಿವಿಎಸ್ ಮೊಪೆಡ್‍ಗಳನ್ನು ಶುಕ್ರವಾರ ಉಡುಪಿ ಜಾಮಿಯ ಮಸೀದಿಯಲ್ಲಿ ವಿತರಿಸಲಾಯಿತು.

ಅರ್ಹ ಫಲಾನುಭವಿಗಳಾದ ಸಮೀರ್ ಅತ್ರಾಡಿ, ಸಂಶುದ್ದೀನ್ ಕಾಪು, ಮುಹಮ್ಮದ್ ಶಫಿ ಬೆಳಪು, ಉಬೆದುಲ್ಲಾ ತೆಂಕನಿಡಿಯೂರು ಅವರಿಗೆ ರಿಕ್ಷಾ ಮತ್ತು ಬಿ.ಝಕೀರ್ ಹೂಡೆ, ಅಬ್ದುರ್ರಹ್ಮಾನ್ ಹಾವಂಜೆ, ಹಂಝ ಹುಸೈನ್  ಅವರಿಗೆ ಮಣಿಪುರ ಅವರಿಗೆ ವಿತರಿಸಲಾಯಿತು.

ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಹಾಜಿ ಕೆ. ಅಬ್ದುಲ್ಲ ಪರ್ಕಳ, ಗೋವಾ ಇಂಡೊಟೆಕ್ ಮಾಲಕ ಮುಸ್ತಾಕ್ ಅಹ್ಮದ್, ಉದ್ಯಮಿ ಹಾಜಿ ಅಬ್ದುಲ್ ಜಲೀಲ್ ಉದ್ಯಾವರ, ಮಸೀದಿಯ ಅಧ್ಯಕ್ಷ ಮುಹಮ್ಮದ್ ಯಾಸೀನ್, ದುಬೈ ಮುಸ್ಲಿಮ್ ವೆಲ್‍ಫೇರ್ ಅಸೋಸಿಯೇಶನ್‍ನ ಪ್ರತಿನಿಧಿ ಟಿ.ಎಸ್.ಅನ್ಸಾರ್ ತೋನ್ಸೆ ಮುಖ್ಯ ಅತಿಥಿಗಳಾಗಿದ್ದರು. ಮಸೀದಿಯ ಖತೀಬ್ ಮೌಲಾನ ಅಬ್ದುರಶ್ರೀದ್ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ದರು. ಸದಸ್ಯರುಗಳಾದ ವಿ.ಎಸ್.ಉಮರ್ ಹಾಗೂ ಯು.ಇಬ್ರಾಹಿಂ ಸಾಹೇಬ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News