ಮತಾಂತರ ಆರೋಪ: ನಾಲ್ವರು ಮಹಿಳೆಯರ ವಿರುದ್ಧ ದೂರು

Update: 2019-02-15 16:07 GMT

ಉಡುಪಿ, ಫೆ.15: ದೊಡ್ಡಣಗುಡ್ಡೆ ಪರಿಸರದ ಮನೆಮನೆಗಳಿಗೆ ತೆರಳಿ ಮತ ಪ್ರಚಾರ ಮಾಡುತ್ತಿದ್ದ ನಾಲ್ವರು ಮಹಿಳೆಯರ ವಿರುದ್ಧ ಬಲವಂತದ ಮತಾಂತರದ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ವರು ಮಹಿಳೆಯರು ಮನೆಗೆ ಅಕ್ರಮವಾಗಿ ಪ್ರವೇಶಿಸಿ ಬಲವಂತದಿಂದ ಯೇಸು ದೇವರ ಬಗ್ಗೆ ತಿಳಿಸುವ ಮೂಲಕ ಮತಾಂತರಕ್ಕೆ ಯತ್ನಿಸಿದ್ದು, ಈ ಮೂಲಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಶ್ರೀನಿವಾಸ್ ಶೆಟ್ಟಿಗಾರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News