ಪುಲ್ವಾಮಾ ಭಯೋತ್ಪಾದಕ ದಾಳಿ: 60 ಕೆ.ಜಿ. ಆರ್‌ಡಿಎಕ್ಸ್ ಬಳಕೆ, 80 ಮೀಟರ್ ದೂರಕ್ಕೆ ಸಿಡಿದ ದೇಹ

Update: 2019-02-15 16:56 GMT

ಹೊಸದಿಲ್ಲಿ, ಫೆ. 15: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 60 ಕಿ.ಗ್ರಾಂ. ಆರ್‌ಡಿಎಕ್ಸ್ ಸ್ಫೋಟಕ ಬಳಸಲಾಗಿತ್ತು ಎಂದು ಸಿಆರ್‌ಪಿಎಫ್ ಹೇಳಿದೆ. ಜೈಶೆ ಮುಹಮ್ಮದ್‌ನ ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ದಾರ್ 350 ಕಿ.ಗ್ರಾಂ. ಸ್ಫೋಟಕ ತುಂಬಿದ ಸ್ಕಾರ್ಪಿಯೊ ಎಸ್‌ಯುವಿ ಕಾರನ್ನು ಸಿಆರ್‌ಪಿಎಫ್ ಬಸ್‌ಗೆ ಢಿಕ್ಕಿ ಹೊಡೆಸಿ ಸ್ಫೋಟಿಸಿದ ಎಂದು ಆರಂಭದಲ್ಲಿ ತನಿಖೆಗಾರರು ತಿಳಿಸಿದ್ದರು.

ಈಗ ದಾರ್ ಎಸ್‌ಯುಪಿ ಅಲ್ಲ ಸೆಡನ್ ಕಾರನ್ನು ಬಸ್‌ಗೆ ಢಿಕ್ಕಿ ಹೊಡೆಸಿದೆ, ಕಾರಿನಲ್ಲಿ 350 ಕಿ.ಗ್ರಾಂ. ಅಲ್ಲ 65 ಕಿ.ಗ್ರಾಂ. ಆರ್‌ಡಿಎಕ್ಸ್ ಇತ್ತು. ಆತ ಕಾರನ್ನು ಬಸ್‌ಗೆ ಢಿಕ್ಕಿ ಹೊಡೆಸಿಲ್ಲ ಬದಲಾಗಿ 78 ಬಸ್‌ಗಳ ವ್ಯೂಹವನ್ನು ಓವರ್‌ಟೇಕ್ ಮಾಡಿ ಆರ್‌ಡಿಎಕ್ಸ್ ಸ್ಫೋಟಗೊಳಿಸಿದ ಎಂದು ತನಿಖೆಗಾರರು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಯೋಧರ ದೇಹಗಳು ಛಿದ್ರಗೊಂಡು 80 ಮೀಟರ್ ದೂರಕ್ಕೆ ಹಾರಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News