ಉಳ್ಳಾಲ ದರ್ಗಾ: ಹುತಾತ್ಮ ಯೋದರಿಗೆ ವಿಶೇಷ ಪ್ರಾರ್ಥನೆ, ಖಂಡನಾ ಸಭೆ

Update: 2019-02-15 17:51 GMT

ಉಳ್ಳಾಲ, ಫೆ. 15: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರ ಎಂಬಲ್ಲಿ ಉಗ್ರರು ಆತ್ಮಹುತಿ ದಾಳಿ ನಡೆಸಿ 46 ಯೋಧರನ್ನು ಸಾಯಿಸಿರುವುದು ಖಂಡನೀಯವಾಗಿದೆ. ರಾಷ್ಟ್ರ ರಕ್ಷಣೆಗಾಗಿ ಲಕ್ಷಾಂತರ ಮಂದಿ ಯೋಧರು ಪ್ರಾಣದ ಹಂಗು ತೊರೆದು ಹಗಲಿರುಲು ತಮ್ಮ ಸೇವೆಯನ್ನು ಅರ್ಪಿಸುತ್ತಾರೆ. ಅಂತಹ ಯೋಧರನ್ನು ಆತ್ಮಾಹುತಿ ದಾಳಿ ನಡೆಸಿ ಸಾಯಿಸಿರುವುದು ದೇಶದ್ರೋಹ ಕೃತ್ಯವಾಗಿದೆ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.

ಅವರು ಯೋಧರ ಹತ್ಯೆ ಖಂಡಿಸಿ ಉಳ್ಳಾಲ ದರ್ಗಾ ವಠಾರದಲ್ಲಿ ದರ್ಗಾ ಸಮಿತಿ ವತಿಯಿಂದ ಶುಕ್ರವಾರ ಪ್ರಾರ್ಥನೆ ಬಳಿಕ ನಡೆದ ಖಂಡನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶ ರಕ್ಷಣೆಗಾಗಿ ದುಡಿಯುವ ಯೋಧರಿಗೆ ನಮ್ಮ ಪ್ರೋತ್ಸಾಹ ಸದಾ ಇದೆ. ಆತ್ಮಾಹುತಿ ದಾಳಿಗೆ ಬಲಿಯಾದ ಯೋಧರಿಗೆ ಚಿರಶಾಂತಿ ಸಿಗಲಿ, ಸೇವೆಯಲ್ಲಿ ನಿರತರಾಗಿರುವ ಯೋಧರಿಗೆ ದೇವನು ನೀಡಲಿ ಎಂದು ಪ್ರಾರ್ಥಿಸಿದರು.

ಉಳ್ಳಾಲ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಬಾಖವಿ ದುಆಗೈದರು, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷರಾದ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಕೋಶಾಧಿಕಾರಿ ಯು.ಕೆ ಇಲ್ಯಾಸ್, ಅಡಿಟರ್ ಯು.ಟಿ ಇಲ್ಯಾಸ್, ಜತೆ ಕಾರ್ಯದರ್ಶಿ ನೌಷದ್ ಅಲಿ, ಆಝಾದ್ ಇಸ್ಮಾಯೀಲ್, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಕೋಶಾಧಿಕಾರಿ ಅಬ್ಬಾಸ್ ಹಾಜಿ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹಾಜಿ ಯು.ಕೆ ಇಬ್ರಾಹೀಮ್, ಕಾರ್ಯದರ್ಶಿ ಎ.ಕೆ ಮೊಹಿಯುದ್ದೀನ್ ಹಾಜಿ, ಸದಸ್ಯರಾದ ಅಯ್ಯೂಬ್ ಮಂಚಿಲ, ಫಾರೂಕ್ ಉಳ್ಳಾಲ, ಅಲಿ ಮೋನು, ಮಹ್ಮೂದ್ ಅಳೇಕಲ, ಯು.ಕೆ ಮುಸ್ತಫ ಮಂಚಿಲ, ಹಮ್ಮಬ್ಬ ಕೋಟೆಪುರ, ಕುಂಞಿ ಅಹ್ಮದ್ ಅಳೇಕಲ, ಕುಂಞಿಮೋನು ಹಿದಾಯತ್ ನಗರ, ಜಮಾಲ್ ಮೇಲಂಗಡಿ, ಅಯ್ಯೂಬ್ ಮಂಚಿಲ ಮತ್ತಿತ್ತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News