ದತ್ತು ಪಡೆಯುವ ಕುರಿತ ಆಪ್ತ ಸಮಾಲೋಚನಾ ಕೇಂದ್ರ

Update: 2019-02-16 14:33 GMT

ಉಡುಪಿ, ಫೆ.16: ಬಾಲ ನ್ಯಾಯ ಕಾಯ್ದೆ 2015ರ ಅನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ರಾಜ್ಯ ದತ್ತು ಸಂಪನ್ಮೂಲ ಕೇಂದ್ರ ಅಥವಾ ಕೇಂದ್ರ ದತ್ತು ಸಂಪನ್ಮೂಲ ಸಹಕಾರದೊಂದಿಗೆ ವಿಶೇಷ ದತ್ತು ಸಂಸ್ಥೆ ಹಾಗೂ ಮಕ್ಕಳ ಪಾಲನಾ ಕೇಂದ್ರಗಳಿಗೆ ನೆರವಾಗಲು ಆಪ್ತ ಸಮಾಲೋಚನಾ ಕೇಂದ್ರವನ್ನು ಸಂಭವನೀಯ ದತ್ತು ಪೋಷಕರಿಗೆ ಆಪ್ತ ಸಮಾಲೋಚನೆಯನ್ನು ಒದಗಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಆಪ್ತ ಸಮಾಲೋಚನಾ ಕೇಂದ್ರವನ್ನು ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿ ರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ ಕಚೇರಿ ಜಿಲ್ಲಾ ಮಕ್ಕಳ ಘಟಕದಲ್ಲಿ ಆರಂಭಿಸಲಾಗಿದೆ.

ಈ ಕೇಂದ್ರವು ರಜಾ ದಿನವನ್ನು ಹೊರತು ಪಡಿಸಿ ಕಚೇರಿಯ ಅವಧಿಯಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 10.30ರಿಂದ ಸಂಜೆ 5.30ರ ವರೆಗೆ ಕಾರ್ಯ ನಿರ್ವಹಿಸ ಲಿದೆ. ಆಸಕ್ತ ಪೋಷಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಜತಾದ್ರಿ, ಮಣಿಪಾಲ, ದೂ.ಸಂ 0820-2574964 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News