ಪುತ್ತೂರು : ಕೆಎಸ್ಸಾರ್ಟಿಸಿ ವಿಕಲಚೇತನ ಮಹಿಳಾ ಸಿಬ್ಬಂದಿಗೆ ಅಧಿಕಾರಿಯಿಂದ ಹಲ್ಲೆ; ದೂರು ದಾಖಲು

Update: 2019-02-16 14:46 GMT

ಪುತ್ತೂರು, ಫೆ. 16: ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಕಲಚೇತನ ಸಿಬ್ಬಂದಿಯೊಬ್ಬರಿಗೆ ವಿಭಾಗೀಯ ಅಧಿಕಾರಿ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿಯಲ್ಲಿರುವ ಕೆಎಸ್ಸಾರ್ಟಿಸಿ ವಿಭಾಗೀಯ ಘಟಕದ ಉಗ್ರಾಣ ಶಾಖೆಯ ಸಿಬ್ಬಂದಿಯಾಗಿರುವ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಹಿಂದಾರು ನಿವಾಸಿ ಶಾಲಿನಿ ದೂರು ನೀಡಿದ ಮಹಿಳೆ. ಅವರಿಗೆ ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗೀಯ ಅಧಿಕಾರಿ ನಾಗರಾಜ್ ಶಿರಾಲಿ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಶಾಲಿನಿ ಅವರು 6 ತಿಂಗಳ ರಜೆ ಹಾಕಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಸಂಸ್ಥೆಯ ವಿಚಾರಣೆಗಾಗಿ ವಿಭಾಗೀಯ ಕಚೇರಿಗೆ ತೆರಳಿದ್ದ ವೇಳೆ ವಿಭಾಗೀಯ ಅಧಿಕಾರಿ ತನ್ನ ವಿರುದ್ಧ ಕೇಂದ್ರ ಕಚೇರಿಗೆ ದೂರು ನೀಡಿರುವುದನ್ನು ವಾಪಾಸು ಪಡೆಯಬೇಕು ಎಂದು ಹೇಳಿ ಹಲ್ಲೆ ನಡೆಸಿ, ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ.

ಹಲ್ಲೆ ನಡೆಸಿದ ವೇಳೆ ನೆಲಕ್ಕೆ ಬಿದ್ದು ಮುಖದ ಮತ್ತು ತಲೆಯ ಭಾಗಕ್ಕೆ ಗಾಯಗೊಂಡಿದ್ದ ಶಾಲಿನಿ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯ ಕುರಿತು ಪುತ್ತೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News