ಡಿವೈಎಫ್‍ಐ: ಟೀಮ್ ಇಂಡಿಯಾದಿಂದ ವೀರ ಯೋಧರಿಗೆ ನಮನ
Update: 2019-02-16 20:28 IST
ಮೂಡುಬಿದಿರೆ, ಫೆ. 16: ಭಯೋತ್ಪಾದಕನ ದಾಳಿಯಿಂದ ಹುತಾತ್ಮರಾದ ಭಾರತೀಯ ಸೈನಿಕರಿಗೆ ಡಿವೈಎಫ್‍ಐ ಹಾಗೂ ಟೀಮ್ ಇಂಡಿಯಾ ಮೂಡುಬಿದಿರೆ ಘಟಕದಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಡಿವೈಎಫ್‍ಐ ಮಾಜಿ ಜಿಲ್ಲಾಧ್ಯಕ್ಷ ಕೆ.ಯಾದವ ಶೆಟ್ಟಿ ಮಾತನಾಡಿ, ಬಡವರು, ಮಧ್ಯಮವರ್ಗದವರು, ಕಾರ್ಮಿಕರ ಮಕ್ಕಳೇ ಹೆಚ್ಚಿರುವ ನಮ್ಮ ದೇಶದ ಸೇನೆಗೆ ನಾವೆಲ್ಲರೂ ಬೆಂಬಲ ನೀಡಬೇಕು. ಸರ್ಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಗುಪ್ತಚರ ಮಾಹಿತಿಯನ್ನು ಪರಿಗಣಿಸಿ ಸೂಕ್ತ ಪರಿಹಾರ ಮಾರ್ಗವನ್ನು ಅನುಸರಿಸಿದರೆ ಇಂತಹ ದುರ್ಘಟನೆಯನ್ನು ತಡೆಯಬಹುದು ಎಂದರು.
ಡಿವೈಎಫ್‍ಐ ಅಧ್ಯಕ್ಷ ಚಿದಾನಂದ, ಮೂಡುಬಿದಿರೆ ಕಾರ್ಯದರ್ಶಿ ರಿಯಾಜ್, ಟೀಮ್ ಇಂಡಿಯಾ ಸದಸ್ಯ ರಿಝ್ವಾನ್, ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಕಾರ್ಯದರ್ಶಿ ಶಂಕರ್ ವಾಲ್ಪಾಡಿ, ಮುಖಂಡರಾದ ಕೃಷ್ಣಪ್ಪ, ವಾಸುದೇವ್ ನಿಡ್ಡೋಡಿ, ರಾಧ, ಗಿರಿಜಾ ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.