×
Ad

ಬಂಟ್ವಾಳ: ಎನ್‍ಸಿಸಿ ಘಟಕದ 50ರ ಸಂಭ್ರಮದ ಮಿಲಿಟರಿ ಏವರ್‍ನೆಸ್ ಕಾರ್ಯಕ್ರಮ

Update: 2019-02-16 20:42 IST

ಬಂಟ್ವಾಳ, ಫೆ 16: ವ್ಯಕ್ತಿ ಸ್ವಾಭಿಮಾನ, ಸಮುದಾಯಿಕ ಸ್ವಾಭಿಮಾನದ ಜೊತೆಗೆ ಧೈರ್ಯ ಇದ್ದರೆ ಮಾತ್ರ ದೇಶ ಕಾಯುವ ಸೈನಿಕನಾಗಲು ಸಾಧ್ಯ. ದೇಶದ ನಾಗರಿಕನಿಂದು ಸ್ವತಂತ್ರವಾಗಿ, ನೆಮ್ಮದಿಯಿಂದ ಬದುಕಲು ಸೈನಿಕರು ಕಾರಣ ಎಂದು ಆರ್ಮಿ ರಿಕ್ರೂಟ್‍ಮೆಂಟ್ ಆಫೀಸ್ ಮಂಗಳೂರಿನ ನಿರ್ದೇಶಕ ಸೇನಾ ಮೆಡಲ್ ಪ್ರಶಸ್ತಿ ಪುರಸ್ಕøತ ಕರ್ನಲ್‍ರಾಜ್ ಮನ್ನಾರ್ ಹೇಳಿದ್ದಾರೆ.

ಅವರು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿೂ ಕಾಲೇಜಿನ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಸೈನ್ಯವನ್ನು ಸೇರಲು ಬೇಕಾದ ಅರ್ಹತೆಗಳು ಮತ್ತು ಸೈನಿಕ ವಲಯದಲ್ಲಿರುವ ವಿವಿಧ ಗ್ರೇಡ್‍ಗಳು ಹಾಗೂ ಸೈನಿಕರಿಗೆ ಸಿಗುವ ವಿವಿಧ ಸೌಲಭ್ಯಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಂಡಿಯನ್ ಆರ್ಮಿಯಿಂದ ನಿವೃತ ಕ್ಯಾಪ್ಟನ್ ಡಾ.ಕೆ.ಜಿ. ಶೆಣೈಯವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಸಿದರು. 
ಕಾಲೇಜಿನ ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ  ಸೈನಿಕರ ಕ್ಷೇತ್ರದ ವಿವಿಧ ಮೆಡಲ್‍ಗಳ ಪ್ರದರ್ಶನವನ್ನು ಉದ್ಘಾಟಿಸಲಾಯಿತು. 

ಕಾಲೇಜಿನ ಉಪಪ್ರಾಂಶುಪಾಲೆ ಡಾ.ಎಚ್.ಆರ್.ಸುಜಾತಾ ಸ್ವಾಗತಿಸಿದರು. ಮಾನಸ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕ ಎನ್‍ಸಿಸಿ ಅಧಿಕಾರಿ ಲೆ.ಸುಂದರ್ ವಂದಿಸಿದರು. ಎನ್‍ಸಿಸಿ ಕೆಡೆಟ್ ಕವನಾ ಕಾರ್ಯಕ್ರಮ ನಿರೂಪಿಸಿದರು.

ತಾಲೂಕಿನ ವಿವಿಧ ಶಾಲಾ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News