ಬಾಂಬಿಲ ಮುಬಾರಕ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಬಿ. ಅಬ್ದುಲ್ ಹಮೀದ್
Update: 2019-02-16 21:07 IST
ಬಂಟ್ವಾಳ, ಫೆ. 16: ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಬಾಂಬಿಲ ಮುಬಾರಕ್ ಜುಮಾ ಮಸೀದಿ ಆಡಳಿತ ಸಮಿತಿಯ ಮಹಾಸಭೆಯು ಮಸೀದಿಯ ಗೌರವಾಧ್ಯಕ್ಷ, ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.
ಇದೇ ವೇಳೆ ಮಸೀದಿ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬಿ.ಅಬ್ದುಲ್ ಹಮೀದ್, ಉಪಾಧ್ಯಕ್ಷರಾಗಿ ಬಿ.ಎಂ.ಬಾವ ಮುಸ್ಲಿಯಾರ್, ಶರೀಫ್ ಮದ್ದ, ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ, ಜೊತೆ ಕಾರ್ಯದರ್ಶಿಯಾಗಿ ಶರಫುದ್ದೀನ್, ಕೋಶಾಧಿಕಾರಿಯಾಗಿ ಅಬ್ದುಲ್ ಲತೀಫ್, ಲೆಕ್ಕ ಪರಿಶೋಧಕರಾಗಿ ಯೂಸುಫ್ ಬಾಂಬಿಲ, ಸಮಿತಿ ಸದಸ್ಯರಾಗಿ ಸ್ವಾಲಿ ಅರೇಬಿಯನ್, ಇಬ್ರಾಹೀಂ ಕೈಲಾರ್, ಬಶೀರ್, ಅಬೂಬಕರ್, ಹಿದಾಯತ್ ಬಾಂಬಿಲ ರಿಯಾಝ್ ಅವರನ್ನು ಆಯ್ಕೆ ಮಾಡಲಾಯಿತು.