ಎನ್‌ಎಸ್‌ಎ, ಬೇಹುಗಾರಿಕಾ ಸಂಸ್ಥೆ ಏನು ಮಾಡುತ್ತಿದೆ: ಮಮತಾ ಬ್ಯಾನರ್ಜಿ ಪ್ರಶ್ನೆ

Update: 2019-02-16 16:00 GMT

ಹೌರಹ್, ಫೆ. 16: ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಿಆರ್‌ಪಿಎಫ್‌ ನ 40 ಯೋಧರು ಹುತಾತ್ಮರಾದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬೇಹುಗಾರಿಕೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾದ್ಯಮದೊಂದಿಗೆ ಮಾತನಾಡಿದ ಅವರು, ‘‘ಎನ್‌ಎಸ್‌ಎ ಹಾಗೂ ಬೇಹುಗಾರಿಕೆ ಸಂಸ್ಥೆಗಳು ಏನು ಮಾಡುತ್ತಿವೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದು ಬೇಹುಗಾರಿಕೆ ಸಂಸ್ಥೆಗಳ ವಿಫಲತೆ. ಭದ್ರತಾ ಬೆದರಿಕೆ ಇರುವಾಗ ಹಲವು ವಾಹನಗಳು ಒಟ್ಟಾಗಿ ಯಾಕೆ ಸಂಚರಿಸಬೇಕಿತ್ತು.’’ ಎಂದು ಪ್ರಶ್ನಿಸಿದ್ದಾರೆ. ದಾಳಿಯನ್ನು ಖಂಡಿಸಿರುವು ಅವರು, ಈ ದಾಳಿಯಲ್ಲಿ ಪಾಕಿಸ್ಥಾನ ಭಾಗಿಯಾಗಿದ್ದರೆ ಅದರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ.

‘‘ಯಾವುದೇ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ವಿದೇಶಾಂಗ ವ್ಯವಹಾರಗಳ ಬಗ್ಗೆ ಚರ್ಚಿಸಲು ನಾನು ಬಯಸುವುದಿಲ್ಲ. ಆದರೆ, ಪಾಕಿಸ್ತಾನ ಏನಾದರೂ ಮಾಡಿದ್ದರೆ, ಅದರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು’’ ಎಂದು ಅವರು ಹೇಳಿದ್ದಾರೆ. ಹುತಾತ್ಮರಾದ ಇಬ್ಬರು ಯೋಧರಲ್ಲಿ ಓರ್ವ ಯೋಧನ ಕುಟುಂಬದ ಸದಸ್ಯರೊಂದಿಗೆ ನಾನು ಮಾತುಕತೆ ನಡೆಸಿದ್ದೇನೆ. ಅಲ್ಲದೆ ನನ್ನ ಸಚಿವರನ್ನು ಅವರ ಮನೆಗಳಿಗೆ ಕಳುಹಿಸಿದ್ದೇನೆ. ಅವರ ಉದ್ಯೋಗಕ್ಕೆ ಅಗತ್ಯವಿರುವ ನೆರವನ್ನು ನಾವು ನೀಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News