ಭಟ್ಟಾರಕರುಗಳಿಂದ ಹೆಗ್ಗಡೆಯವರಿಗೆ ಸನ್ಮಾನ. “ಸದ್ಧರ್ಮ ಪರಿಪಾಲಕರು” ಬಿರುದು

Update: 2019-02-16 16:44 GMT

ಬೆಳ್ತಂಗಡಿ, ಫೆ. 16: ಧರ್ಮಸ್ಥಳ ರತ್ನಗಿರಿಯಲ್ಲಿ ಶನಿವಾರ ನಡೆದ ಭಗವಾನ್ ಬಾಹುಬಲಿ ಸ್ವಾಮಿಯ ಚತುರ್ಥ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸಮಸ್ತ ಭಟ್ಟಾರಕರುಗಳ ಪರವಾಗಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ “ಸದ್ಧರ್ಮ ಪರಿಪಾಲಕರು” ಬಿರುದು ನೀಡಿ ಸನ್ಮಾನಿಸಿದರು.

ಧರ್ಮಸ್ಥಳದಲ್ಲಿ ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸಿ ಅಭಿನವ ಚಾವುಂಡರಾಯರಾಗಿ ಚಿರಪರಿಚಿತರಾಗಿರುವಿರಿ. ಧರ್ಮಸ್ಥಳದಲ್ಲಿ ಚತುರ್ಥ ಮಹಾ ಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸಿರುವುದಕ್ಕಾಗಿ ಅಭಿನಂದಿಸಿ ಹೆಗ್ಗಡೆಯವರಿಗೆ ಉಜ್ವಲ ಭವಿಷ್ಯವನ್ನು ಅವರು ಹಾರೈಸಿದರು. 

ಕೊಲ್ಲಾಪುರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಕಾರ್ಕಳದ ಲಲಿತಕೀರ್ತಿ ಭಟ್ಟಾರಕರು, ಕನಕಗಿರಿಯ ಭುವನಕೀರ್ತಿ ಭಟ್ಟಾರಕರು, ಅರಿಹಂತಗಿರಿಯ ಧವಲಕೀರ್ತಿ ಭಟ್ಟಾರಕರು, ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕರು, ಮೂಡಬಿದ್ರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಜಿನಕಂಚಿ ಮಠದ ಲಕ್ಷ್ಮೀಸೇನ ಭಟ್ಟಾರಕರು, ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕರು, ನರಸಿಂಹರಾಜಪುರದ ಲಕ್ಷ್ಮೀಸೇನಾ ಭಟ್ಟಾರಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News