ಪಾಕ್: ಭಾರತೀಯ ಹಾಡಿಗೆ ಕುಣಿದು, ತ್ರಿವರ್ಣ ಧ್ವಜ ಹಾರಿಸಿದ ಮಕ್ಕಳು

Update: 2019-02-16 17:09 GMT

ಕರಾಚಿ, ಫೆ. 16: ಪಾಕಿಸ್ತಾನದ ಶಾಲೆಯೊಂದರಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ, ಕೆಲವು ವಿದ್ಯಾರ್ಥಿಗಳು ಭಾರತೀಯ ಹಾಡೊಂದಕ್ಕೆ ಕುಣಿದು ಭಾರತದ ರಾಷ್ಟ್ರಧ್ವಜವನ್ನು ಬೀಸಿದ ಬಳಿಕ, ಅಧಿಕಾರಿಗಳು ಆ ಶಾಲೆಯ ನೋಂದಣಿಯನ್ನು ಅಮಾನತಿನಲ್ಲಿಟ್ಟಿದ್ದಾರೆ.

ಖಾಸಗಿ ಸಂಸ್ಥೆಗಳ ತಪಾಸಣೆ ಮತ್ತು ನೋಂದಣಿ ನಿರ್ದೇಶನಾಲಯ ಸಿಂಧ್ (ಡಿಐಆರ್‌ಪಿಐಎಸ್) ಮುಂದೆ ಹಾಜರಾಗುವಂತೆ ಶಾಲೆಯ ಮಾಲೀಕನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಕಳೆದ ವಾರ ನಡೆದ ಕಾರ್ಯಕ್ರಮದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಅದು ಬೆಳಕಿಗೆ ಬಂದಿದೆ ಎಂದು ‘ದ ನ್ಯೂಸ್ ಇಂಟರ್‌ನ್ಯಾಶನಲ್’ ವರದಿ ಮಾಡಿದೆ.

ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿರುವುದಕ್ಕಾಗಿ ‘ಮಾಮಾ ಬೇಬಿ ಕೇರ್ ಕೇಂಬ್ರಿಜ್ ಸ್ಕೂಲ್’ನ್ನು ಅಮಾನತಿನಲ್ಲಿಡಲಾಗಿದೆ ಎಂದು ವರದಿ ತಿಳಿಸಿದೆ.

►ಇಂಡೋನೇಶ್ಯ, ಮಲೇಶ್ಯ ಪ್ರವಾಸವೂ ಮುಂದೂಡಿಕೆ

ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಇಂಡೋನೇಶ್ಯ ಮತ್ತು ಮಲೇಶ್ಯಕ್ಕೆ ನೀಡಲಿರುವ ಭೇಟಿಯನ್ನು ಮುಂದೂಡಿದ್ದಾರೆ ಎಂದು ಇಂಡೋನೇಶ್ಯದ ವಿದೇಶ ಸಚಿವಾಲಯ ಹೇಳಿದೆ.

ಪ್ರವಾಸ ಮುಂದೂಡಿಕೆಗೆ ಯಾವುದೇ ಕಾರಣವನ್ನು ನೀಡಲಾಗಿಲ್ಲ.

ನೂತನ ವೇಳಾಪಟ್ಟಿಯ ಬಗ್ಗೆ ಸೌದಿ ಅರೇಬಿಯ ಮತ್ತು ಇಂಡೋನೇಶ್ಯಗಳು ಪರಸ್ಪರ ಚರ್ಚಿಸಿ ನಿರ್ಧರಿಸಲಿವೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News