ಮುಲ್ಕಿ ತಾಲೂಕಿಗೆ ಕೆ.ಅಮರನಾಥ ಶೆಟ್ಟಿ ಆಗ್ರಹ

Update: 2019-02-16 17:24 GMT

ಮೂಡುಬಿದಿರೆ, ಫೆ. 16: ಮಂಗಳೂರು ತಾಲೂಕಿನಿಂದ 30 ಕಿ.ಮೀ ದೂರವಿರುವ ಮುಲ್ಕಿ ಹೋಬಳಿ ಆಡಳಿತಾತ್ಮಕ ಸುಧಾರಣೆಯಾಗಲು ತಾಲೂಕು ರಚನೆ ಅಗತ್ಯವಾಗಿ ಆಗಬೇಕಾಗಿದೆ. ಮುಲ್ಕಿ ತಾಲೂಕು ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಕುಮಾರ ಸ್ವಾಮಿ, ಕಂದಾಯ ಸಚಿವರಿಗೆ ಮನವಿ ಮಾಡಿದ್ದೇನೆ. ಆದ್ಯತೆ ಮೇರೆಗೆ ಮುಲ್ಕಿ ತಾಲೂಕು ಆಗುವ ಭರವಸೆಯಿದೆ ಎಂದು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕು ಪುನರ್ ರಚನೆಗೆ ಸರ್ಕಾರವು ನೇಮಿಸಿದ್ದ ಪ್ರೊ. ಹುಂಡೇಕರ್, ಪಿ.ಸಿ.ಗದ್ದಿ ಗೌಡರ್ ಸಮಿತಿಯು ಕೂಡ ಮುಲ್ಕಿ ತಾಲೂಕು ಶಿಫಾರಸ್ಸು ಮಾಡಿದ್ದರು. ತಾಲೂಕಿಗೆ ಬೇಕಾದ ಬಹುತೇಕ ಎಲ್ಲ ಸೌಕರ್ಯ ಹಾಗೂ ಅರ್ಹತೆಯಿರುವ ಮುಲ್ಕಿ ತಾಲೂಕು ಆಗಬೇಕಾಗಿದೆ ಎಂದರು.

ಜೆಡಿಎಸ್ ಜಿಲ್ಲಾ ವಕ್ತಾರ ಹರಿಪ್ರಸಾದ್ ಶೆಟ್ಟಿ ಪಾಲಡ್ಕ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ, ಕಾರ್ಯದರ್ಶಿ ಪೃಥ್ವೀರಾಜ್, ಮೂಡುಬಿದಿರೆ ಅಭಿವೃದ್ಧಿ ನಾಗರಿಕ ಸಮಿತಿಯ ವೆಂಕಟೇಶ್ ಹೆಬ್ಬಾರ್, ಉಪಾಧ್ಯಕ್ಷ ಶಶಿಕಾಂತ್ ಜೋಯಲ್ ಡಿ ಸೋಜ, ಮುಖಂಡರಾದ ಹರೀಶ್ ಪುತ್ರನ್, ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಮುಖಂಡರಾದ ಭಾಸ್ಕರ ಆಚಾರ್ಯ, ಕಿಶೋರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News