ಪುಲ್ವಾಮ ದಾಳಿಕೋರರನ್ನು ಶಿಕ್ಷಿಸಲಾಗುವುದು: ಪ್ರಧಾನಿ

Update: 2019-02-16 17:52 GMT

ಯುವಾತ್ಮಲ್, ಫೆ. 16: ಪಾಕಿಸ್ತಾನದ ಹೆಸರು ಹೇಳದೆ ಶನಿವಾರ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಅದು ಭಯೋತ್ಪಾದನೆಗೆ ಸಮಾನಾರ್ಥಕವಾಗಿದೆ ಎಂದಿದ್ದಾರೆ. ಭಾರತ ವಿಭಜನೆಯ ಬಳಿಕ ರೂಪುಗೊಂಡ ಈ ದೇಶ ಭಯೋತ್ಪಾದನೆಗೆ ಆಶ್ರಯ ನೀಡುತ್ತಿದೆ. ದಿವಾಳಿಯ ಅಂಚಿನಲ್ಲಿರುವ ಅದು ಭಯೋತ್ಪಾದನೆಗೆ ಸಮಾನಾರ್ಥಕವಾಗಿದೆ ಎಂದು ಮಹಾರಾಷ್ಟ್ರದ ಯುವಾತ್ಮಲ್‌ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿ ಅವರು ಹೇಳಿದರು. ಈ ದಾಳಿಯನ್ನು ಭಯೋತ್ಪಾದಕ ಸಂಘಟನೆ ಎಸಗಿದೆ.

ಅವರು ಹೇಗೆ ಅಡಗಲು ಪ್ರಯತ್ನಿಸುತ್ತಾರೆ ಎಂಬುದು ವಿಚಾರವಲ್ಲ. ಅವರನ್ನು ಶಿಕ್ಷಿಸಲಾಗುವುದು. ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ ನೀಡಲಾಗಿದೆ. ನನಗೆ ಗೊತ್ತು, ಪುಲ್ವಾಮದಲ್ಲಿ ನಡೆದ ಘಟನೆ ಬಳಿಕ ನೀವೆಲ್ಲ ತೀವ್ರ ನೋವಲ್ಲಿ ಇರಬಹುದು. ನನಗೆ ನಿಮ್ಮ ಆಕ್ರೋಶ ತಿಳಿಯುತ್ತದೆ. ಈ ದಾಳಿಯಲ್ಲಿ ಮಹಾರಾಷ್ಟ್ರದ ಇಬ್ಬರು ಮಕ್ಕಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಬಲಿದಾನ ವ್ಯರ್ಥವಾಗದು ಎಂದು ಮೋದಿ ಹೇಳಿದ್ದಾರೆ. 40 ಯೋಧರು ಹುತಾತ್ಮರಾಗಲು ಕಾರಣವಾದ ಪುಲ್ವಾಮ ಆತ್ಮಾಹುತಿ ಬಾಂಬ್ ದಾಳಿಯನ್ನು ಉಲ್ಲೇಖಿಸಿ ಅವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News