ಅಖಿಲ ಭಾರತ ಬ್ಯಾರಿ ಪರಿಷತ್-ಅಹಿಂದ ಜನಚಳುವಳಿಯಿಂದ ಸಂತಾಪ

Update: 2019-02-16 17:52 GMT

ಮಂಗಳೂರು, ಫೆ.16: ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಮತ್ತು ಬ್ಯಾರಿ ಆಂದೋಲನದ ರೂವಾರಿ, ಅಬ್ದುಲ್ ರಹೀಂ ಟೀಕೆ ಅವರಿಗೆ ಅಖಿಲ ಭಾರತ ಬ್ಯಾರಿ ಪರಿಷತ್-ಅಹಿಂದ ಜನ ಚಳುವಳಿಯಿಂದ ಸಂತಾಪ ಸೂಚಕ ಸಭೆಯು ಶನಿವಾರ ಬ್ಯಾರಿ ಪರಿಷತ್‌ನ ಕಚೇರಿಯಲ್ಲಿ ಜರುಗಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಹಿಂದ ಜನ ಚಳುವಳಿಯ ಅಧ್ಯಕ್ಷ ವಾಸುದೇವ ಬೋಳೂರು ಎಲ್ಲಾ ಜಾತಿ, ಧರ್ಮೀಯರು ಕೂಡಾ ಜೊತೆಗೂಡಿಕೊಂಡು ಖಂಡಿಸಿದ್ದಾರಲ್ಲದೆ, ಸಂತಾಪ ಸೂಚಿಸಿದ್ದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಜೆ.ಹುಸೈನ್, ಕೆ.ಸಿ.ಆಳ್ವ, ಎಂ.ಎಸ್. ಶೆಟ್ಟಿ ಸರಪಾಡಿ, ಪದ್ಮನಾಭ ನರಿಂಗಾನ, ವಲೇರಿಯನ್ ಎಸ್.ಲೋಬೊ, ಮಜೀದ್ ಸೂರಲ್ಪಾಡಿ, ಹಾರಿಸ್ ತೋಡಾರು ಮತ್ತಿತರರು ಮಾತನಾಡಿದರು.

ಅಖಿಲ ಭಾರತ ಬ್ಯಾರಿ ಪರಿಷತ್ ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News