ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದಿಂದ ಖಂಡನಾ ಸಭೆ

Update: 2019-02-16 17:53 GMT

ಮಂಗಳೂರು, ಫೆ.16: ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಯನ್ನು ವಿರೋಧಿಸಿ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಶನಿವಾರ ವಿವಿಧ ಕಾಲೇಜುಗಳಲ್ಲಿ ಖಂಡನಾ ಸಭೆಯು ನಡೆಯಿತು.

ಸಭೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಸೈಯದ್ ಅಫ್ರಿದ್ ದೇಶದ ರಕ್ಷಣಾ ಇಲಾಖೆ ಮತ್ತು ಆಂತರಿಕ ಭದ್ರತೆಯನ್ನು ಸುಭದ್ರಗೊಳಿಸಲು ಕೇಂದ್ರ ಸರಕಾರ ಕಟಿಬದ್ಧವಾಗಬೇಕು. ಅಲ್ಲದೆ ದಾಳಿಯಲ್ಲಿ ಮಡಿದ ಯೋಧರ ಕುಟುಂಬಗಳಿಗೆ ಅರ್ಹ ರೀತಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ನಗರದ ಮಿಲಾಗ್ರಿಸ್, ರೊಸಾರಿಯೋ, ಸೈಂಟ್ ಆ್ಯನ್ಸ್, ಬದ್ರಿಯಾ, ಕರಾವಳಿ, ಸೇಕ್ರೆಡ್ ಹಾರ್ಟ್, ಸಂತ ಫಿಲೋಮಿನಾ, ಪ್ರಸನ್ನ ಉಜಿರೆ, ಉಪ್ಪಿನಂಗಡಿ ಮತ್ತಿತರ ಕಡೆಗಳಲ್ಲಿ ವಿದ್ಯಾರ್ಥಿಗಳು ಹುತಾತ್ಮರಾದ ಯೋಧರ ಭಾವಚಿತ್ರವನ್ನು ಪ್ರದರ್ಶಿಸಿದರು.

ಒಕ್ಕೂಟದ ಸದಸ್ಯರಾದ ಅಬ್ದುಲ್ ಬಾಸಿತ್, ಸಮದ್ ಉಪ್ಪಿನಂಗಡಿ, ಗರೀಬ್ ನವಾಝ್, ನೌಫಲ್ ಕುಪ್ಪೇಟಿ, ಸಕೀನಾ ಮುನವ್ವರ , ಫಾಝಿಲ್, ಅಶ್ಫಾಕ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News