ಪ್ರಾಪರ್ಟಿ ಕಾರ್ಡ್ ಗೊಂದಲ: ಅದಾಲತ್ ನಡೆಸಲು ಶಾಸಕ ಡಾ.ಭರತ್ ಶೆಟ್ಟಿ ಆಗ್ರಹ

Update: 2019-02-16 17:59 GMT

ಸುರತ್ಕಲ್, ಫೆ.16: ಪ್ರಾಪರ್ಟಿ ಕಾರ್ಡ್ ವಿತರಣೆಯಲ್ಲಿ ಅವ್ಯವಸ್ಥೆ ಉಂಟಾಗಿದ್ದು, ನಾಗರಿಕರು ದಿನವಿಡೀ ಸರತಿ ಸಾಲಿನಲ್ಲಿ ನಿಲ್ಲುವ ಪ್ರಮೇಯ ಬಂದೊದಗಿದೆ. ಅಲ್ಲದೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿಯೂ ಸಿಗುತ್ತಿಲ್ಲ. ತಕ್ಷಣ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಪರ್ಟಿ ಅದಾಲತ್ ನಡೆಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಶನಿವಾರ ಜೊತೆ ಮಾತುಕತೆ ನಡೆಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕಾಗಿದೆ. ಪ್ರಾಪರ್ಟಿ ಕಾರ್ಡ್ ಮಾಡಿಕೊಡುವು ದಾಗಿ ಹೇಳಿ ಮೋಸ ಮಾಡುವ ಜನ ಹೆಚ್ಚಾಗಿದ್ದಾರೆ. ಇದುವರೆಗೆ ಕೇವಲ ಶೇ.30ರಷ್ಟು ಪ್ರಾಪರ್ಟಿ ಕಾರ್ಡ್ ಮಾಡಲಾಗಿದ್ದು, ಉಳಿದವರು ಇದೀಗ ಕಾರ್ಡ್ ಸಿಗದೆ ಬ್ಯಾಂಕ್‌ನಲ್ಲಿ ಸಾಲ ಮಾಡಿ ಮನೆ ಕಟ್ಟದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಪ್ರಾಪರ್ಟಿ ಕಾರ್ಡ್ ಮಾಡಲು ಕೊಟ್ಟ ದಾಖಲೆಗಳು ಕಾಣೆಯಾಗಿವೆ. ಕಳೆದ ಎರಡು ದಿನಗಳಿಂದ ಯಾರಿಗೂ ಪ್ರಾಪರ್ಟಿ ಕಾರ್ಡ್ ಸಿಕ್ಕಿಲ್ಲ. ಈ ಎಲ್ಲಾ ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News