ಯೋಧರ ಮೇಲಿನ ದಾಳಿ ಖಂಡನೀಯ: ಸಿದ್ದೀಖ್ ಸಖಾಫಿ ಕೋಟ

Update: 2019-02-17 06:46 GMT

ಕುಂದಾಪುರ, ಫೆ.17: ದೇಶ ರಕ್ಷಣೆಗಾಗಿ ಕೊರೆಯುವ ಚಳಿ, ಬಿಸಿಲಿಗೆ ಮೈಯೊಡ್ಡಿ ನಿಂತು ಗಡಿ ಕಾಯುವ ಸೈನಿಕರ ಮೇಲಿನ ದಾಳಿ ಅಮಾನವೀಯ. ಪುಲ್ವಾಮದಲ್ಲಿ ನಡೆದ ಭಯೋತ್ಪಾದನಾ ಆಕ್ರಮಣವನ್ನು ಪ್ರತಿಯೊಬ್ಬ ಭಾರತೀಯನು ಖಂಡಿಸಬೇಕಿದೆ ಎಂದು ಸಿದ್ದೀಕ್ ಸಖಾಫಿ ಹೇಳಿದ್ದಾರೆ.

ಎಸ್ಸೆಸ್ಸೆಫ್ ಕೋಟ ಪಡುಕರೆ ಶಾಖೆಯ ವತಿಯಿಂದ 22ನೇ ವಾರ್ಷಿಕೋತ್ಸವ ಪ್ರಯುಕ್ತ ನಡೆಯುತ್ತಿರುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇದೇ ವೇಳೆ  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಗೀತಾನಂದ ಫೌಂಡೇಶನ್ ಟ್ರಸ್ಟ್ ಸ್ಥಾಪಕ ಆನಂದ್ ಸಿ. ಕುಂದರ್ ಅವರನ್ನು ಎಸ್ಸೆಸ್ಸೆಫ್ ವತಿಯಿಂದ ಸನ್ಮಾನಿಸಲಾಯಿತು.

ಕೆ.ಎಚ್.ಮೂಸಾ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಇಬ್ರಾಹೀಂ, ದಾವೂದ್ ಬಿ.ಕೆ, ಕೆ.ಎಚ್.ಹಸೈನಾರ್, ಮೊಯ್ದಿನ್ ಬ್ಯಾರಿ ಮಣಿಪುರ, ಕೆ.ಎಚ್ ಹುಸೈನ್, ಕೆ.ಎಚ್.ಇಬ್ರಾಹೀಂ, ಕೆ.ಎಂ.ಇಮ್ರಾನ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.  ಕೆ.ಎಂ.ಶರೀಫ್ ಸ್ವಾಗತಿಸಿ, ವಂದಿಸಿದರು.

ಇದೇ ಸಂದರ್ಭ ಪುಲ್ವಮಾದಲ್ಲಿ ಹುತಾತ್ಮರಾದ ಯೋಧರಿಗೆ ಆತ್ಮ ಶಾಂತಿಗಾಗಿ ಹಾಗೂ ಅವರ ಕುಟುಂಬಕ್ಕೆ ಅದನ್ನು ಸಹಿಸುವ ಶಕ್ತಿಯನ್ನು ಅಲ್ಲಾಹು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News