ಮೇಲ್ತೆನೆಯಿಂದ ರಹೀಂ ಟೀಕೆಯವರಿಗೆ ನುಡಿನಮನ

Update: 2019-02-17 06:54 GMT

ಮಂಗಳೂರು, ಫೆ.17: ದೇರಳಕಟ್ಟೆಯ ಬ್ಯಾರಿ ಲೇಖಕರ ಮತ್ತು ಕಲಾವಿದರ ಕೂಟವಾದ 'ಮೇಲ್ತೆನೆ' ವತಿಯಿಂದ ಅಗಲಿದ ಬ್ಯಾರಿ ಆಂದೋಲನದ ರೂವಾರಿ, ಲೇಖಕ ಚಿಂತಕ ಅಬ್ದುರ್ರಹೀಂ ಟೀಕೆಯವರಿಗೆ ನುಡಿನಮನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೇಲ್ತೆನೆಯ ಗೌರವಾಧ್ಯಕ್ಷ ಅಲಿಕುಂಙಿ ಪಾರೆ ಮಾತನಾಡಿ, ರಹೀಂ ಟೀಕೆಯವರು ಬ್ಯಾರಿ ಭಾಷೆ, ಸಮುದಾಯ, ಕಲೆ, ಸಂಸ್ಕೃತಿ ಇತ್ಯಾದಿಗಳಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಲೇಖಕ ಇಸ್ಮತ್ ಪಜೀರ್ ರಹೀಂ ಟೀಕೆಯವರ ಕಾವ್ಯದ ಕುರಿತಂತೆ ಮಾತನಾಡಿದರು. ರಹೀಂ ಟೀಕೆಯವರ ಕಾವ್ಯಗಳಲ್ಲಿ ಕಾವ್ಯದ ಸವಿಗಿಂತ ಹೆಚ್ಚಾಗಿ ತತ್ವಜ್ಞಾನ ಅಡಗಿತ್ತು. ಟೀಕೆಯವರು ಬ್ಯಾರಿ ಆಂದೋಲನದ ಆದ್ಯ ಪ್ರವರ್ತಕರಲ್ಲಿ ಪ್ರಮುಖರಾದರೂ ಅಕಾಡಮಿ ಸ್ಥಾಪನೆಯಾದಾಗ ಅಧಿಕಾರದಿಂದ ದೂರವುಳಿದು ಗಾಂಧಿಯ ಸಂತತ್ವ ತೋರಿದ್ದರು ಎಂದರು.

ಕವಿ ಬಶೀರ್ ಅಹ್ಮದ್ ಕಿನ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಿಯ ಕನ್ನಡ ಉಪನ್ಯಾಸಕ ಇಸ್ಮಾಯಿಲ್.ಟಿ. ಟೀಕೆಯವರಿಗಾಗಿ ಮತ್ತು ಉಗ್ರರ ದಾಳಿಗೆ ಬಲಿಯಾದ ಯೋಧರಿಗಾಗಿ ಪ್ರಾರ್ಥಿಸಿದರು.

ಮೇಲ್ತೆನೆಯ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಾನಿಗೆ  ಸ್ವಾಗತಿಸಿ , ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಬಾಷಾ ನಾಟೆಕಲ್ ವಂದಿಸಿದರು. ಮುಹಮ್ಮದ್ ಕೈಸರ್, ಅಬ್ದುರ್ರಝಾಕ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News