ಫರಂಗಿಪೇಟೆ, ಪಿ.ಎಫ್.ಐ. ಸಂಸ್ಥಾಪನ ದಿನ ಆಚರಣೆ

Update: 2019-02-17 08:41 GMT

ಫರಂಗಿಪೇಟೆ, ಫೆ.19: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನ ದಿನವನ್ನು ಫರಂಗಿಪೇಟೆ ವಲಯ ಸಮಿತಿಯ ವತಿಯಿಂದ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಹಂಚುವ ಮೂಲಕ ಆಚರಿಸಲಾಯಿತು

ಈ ಸಂದರ್ಭ ಪಿ.ಎಫ್.ಐ. ವಲಯಾಧ್ಯಕ್ಷ ನಿಸಾರ್ ವಳವೂರು, ಪ್ರಧಾನ ಕಾರ್ಯದರ್ಶಿ ಇರ್ಫಾನ್, ಜಿಲ್ಲಾ ಸಮಿತಿಯ ಸದಸ್ಯ ಮೂಸಬ್ಬ, ತುಂಬೆ ಏರಿಯಾ ಅದ್ಯಕ್ಷ ಸಿರಾಜ್, ಫರಂಗಿಪೇಟೆ ಏರಿಯಾ ಅದ್ಯಕ್ಷ ನಝೀರ್, ಅರ್ಕುಳ ವಲಯ ಕಾರ್ಯದರ್ಶಿ ತೌಸೀಫ್, ಎಸ್.ಡಿ.ಪಿ.ಐ. ಪುದು ಗ್ರಾಮ ಸಮಿತಿಯ ಅಧ್ಯಕ್ಷ ಇಕ್ಬಾಲ್, ತುಂಬೆ ಸಮಿತಿ ಅಧ್ಯಕ್ಷ ಅಝೀಝ್, ಝುಬೈರ್, ಅಶ್ಫಾಕ್ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಫರಂಗಿಪೇಟೆಯಲ್ಲಿ ಪಿ.ಎಫ್.ಐ. ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಸಲೀಮ್ ಕುಂಪನಮಜಲ್ ಸಂಘಟನೆಯ ಧ್ವಜಾರೋಹಣಗೈದರು. ಏರಿಯಾ ಅಧ್ಯಕ್ಷ ನಝೀರ್ ಅಧ್ಯಕ್ಷತೆ ವಹಿಸಿದರು.

 ಜಿಲ್ಲಾ ಸಮಿತಿಯ ಸದಸ್ಯ ಇಮ್ತಿಯಾಝ್ ತುಂಬೆ ಸಂದೇಶ ಭಾಷಣ ಮಾಡಿದರು. ಫರಂಗಿಪೇಟೆ ಮಸೀದಿಯ ಅಧ್ಯಕ್ಷ ಮುಹಮ್ಮದ್ ಬಾವ, ಕೋಶಾಧಿಕಾರಿ ಮಜೀದ್, ಎಸ್.ಡಿ.ಪಿ.ಐ. ಮುಖಂಡ ಸುಲೈಮಾನ್ ಉಸ್ತಾದ್, ಇಕ್ಬಾಲ್ ಅಮೆಮಾರ್, ಐಇಸಿ ಫರಂಗಿಪೇಟೆ ಅಧ್ಯಕ್ಷ ಬಶೀರ್ ಮತ್ತಿತರರು ಉಪಸ್ಥಿತರಿದ್ದರು 

ಅಮೆಮ್ಮಾರ್ ನಲ್ಲಿ ಪಿ.ಎಫ್.ಐ ಮುಖಂಡ ಸುಲೈಮಾನ್ ಉಸ್ತಾದ್ ಧ್ವಜಾರೋಹಣಗೈದರು. ಇಮ್ತಿಯಾಝ್ ತುಂಬೆ ಸಂದೇಶ ನೀಡಿದರು, ಮಸೀದಿ ಸಮಿತಿಯ ಸದಸ್ಯ ಹಮೀದ್, ಮುಖಂಡರಾದ ನಝೀರ್, ಇಕ್ಬಾಲ್, ಅಬ್ದುಲ್ ರಹಿಮಾನ್, ಆದಮ್ ಉಪಸ್ಥಿತರಿದ್ದರು. ಖಾದರ್ ಸ್ವಾಗತಿಸಿ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News