ಪುಂಜಾಲಕಟ್ಟೆ: ಪಾಪ್ಯುಲರ್ ಫ್ರಂಟ್ ಡೇ; ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

Update: 2019-02-17 08:57 GMT

ಬಂಟ್ವಾಳ, ಫೆ.17:  ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಪುಂಜಾಲಕಟ್ಟೆ ಸಮಿತಿಯ ವತಿಯಿಂದ ಪುಂಜಾಲಕಟ್ಟೆಯಲ್ಲಿ ರವಿವಾರ ಪಾಪ್ಯುಲರ್ ಫ್ರಂಟ್ ಡೇ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರು ಡಿವಿಷನ್ ಅಧ್ಯಕ್ಷ  ನಿಸಾರ್ ಕುದ್ರಡ್ಕ ಧ್ವಜಾರೋಹಣ ನೆರವೇರಿಸಿ ಸಂದೇಶ ಭಾಷಣ ಮಾಡಿದರು.

ಈ ಸಂದರ್ಭ ಪಾಪ್ಯುಲರ್ ಫ್ರಂಟ್ ಮಂಗಳೂರು ಝೋನಲ್ ಸಮಿತಿಯ ಸದಸ್ಯರಾದ ಲತೀಪ್ ಪುಂಜಾಲಕಟ್ಟೆ, ಪುಂಜಾಲಕಟ್ಟೆ ಬದ್ರಿಯ ಜುಮಾ ಮಸ್ಜಿದ್ ಜೊತೆ ಕಾರ್ಯದರ್ಶಿ ಖಾದರ್ ಪುಂಜಾಲಕಟ್ಟೆ, ಉಮರ್ ಪುಂಜಾಲಕಟ್ಟೆ, ಉಮರ್ ಎಂ.ಆರ್.ಎಸ್.,  ಕಾವೇರಿ ಯಹ್ಯಾ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಮೌನ ಪ್ರಾರ್ಥನೆ: ಇದೇ ಸಂದರ್ಭ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಎರಡು ನಿಮಿಷಗಳ ಮೌನ ಪ್ರಾರ್ಥನೆ ಮಾಡಲಾಯಿತು.

ತಾಜುದ್ದೀನ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News