ಕಿನ್ಯದಲ್ಲಿ ಪಾಪ್ಯುಲರ್ ಫ್ರಂಟ್ ದಿನಾಚರಣೆ

Update: 2019-02-17 09:52 GMT

ಮಂಗಳೂರು, ಫೆ.17: ಕಿನ್ಯ ರಿಫಾಯಿ ನಗರದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ದಿನಾಚರಣೆಯು ಶಿಹಾಬ್ ಕಿನ್ಯ ಅದ್ಯಕ್ಷತೆಯಲ್ಲಿ ನಡೆಯಿತು.

ಪಿಎಫ್ಐ ಕಿನ್ಯ ಏರಿಯಾ ಅದ್ಯಕ್ಷ ನಾಸಿರ್ ಕೋಡಿ ಧ್ವಜಾರೋಹಣ ನೆರವೇರಿಸಿದರು. ನೌಶಾದ್ ಕಲ್ಕಟ್ಟ ಪಾಪ್ಯುಲರ್ ಫ್ರಂಟ್ ದಿನದ ಸಂದೇಶ ನೀಡಿದರು.
ಇದೇ ವೇಳೆ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರಿಂದ ಹತರಾದ ಹುತಾತ್ಮ ಸೈನಿಕರಿಗೆ ಮೌನ ಪ್ರಾರ್ಥನೆ ಮತ್ತು ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಅಬ್ಬಾಸ್ ಕಿನ್ಯ, ಶಹೀದ್ ಕಲ್ಕಟ್ಟ, ಮುಖ್ತಾರ್ ಕಿನ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶಾಫಿ ಕಿನ್ಯ ನೆರೆವೆರಿಸಿದರು. ಹಾಶಿಂ ಕಿನ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News