ಅಡ್ಡೂರು: ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ

Update: 2019-02-17 12:59 GMT

ಅಡ್ಡೂರು, ಫೆ.17: ಎಸ್ಕೆಎಸ್ಸೆಸೆಫ್ ಕಾಂಜಿಲಕೊಡಿ ಶಾಖೆಯ ವತಿಯಿಂದ ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ ಹಾಗೂ ಶೈಖುನಾ ಮಿತ್ತಬೈಲ್ ಉಸ್ತಾದರ ಅನುಸ್ಮರಣೆ ಕಾರ್ಯಕ್ರಮ ಕಾಂಜಿಲಕೋಡಿಯ ಬದ್ರುಲ್ ಹುದಾ ಜುಮಾ ಮಸೀದಿ ವಠಾರದಲ್ಲಿ ಶನಿವಾರ ನಡೆಯಿತು.

ಮಾಜಿ ಖತೀಬ್ ಎಸ್.ಬಿ.ಯೂಸುಫ್ ಮುಸ್ಲಿಯಾರ್ ದುಆಗೈದರು. ಕಾಂಜಿಲಕೋಡಿ ಮಸೀದಿಯ ಖತೀಬ್ ಅಬ್ದುಲ್ ರಝಾಕ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಕೆಎಸ್ಸೆಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಮುಖ್ಯಭಾಷಣಗೈದರು.

ಈ ವೇಳೆ ಹಾಜಿ ಎಂ.ಎಚ್.ಮುಹಿಯುದ್ದೀನ್ ಸ್ಮರಣಾ ಸಂಚಿಕೆ ಬಿಡುಗಡೆಗೊಳಿಸಿದರು. ಶೈಖುನಾ ಅಸೈಯ್ಯದ್ ಅಲ್ ಹಾದಿ ಯಹ್ಯಾ ತಂಙಳ್ ಸಲ್ಮಾರ ದುಆದ ನೇತೃತ್ವ ವಹಿಸಿದ್ದರು. ಹುಸೈನ್ ದಾರಿಮಿ ರೆಂಜಲಾಡಿ, ಟಿ.ಕೆ.ಅಬ್ದುಲ್ ರಹಿಮಾನ್, ಶೈಖುನಾ ಜಬ್ಬಾರ್ ಉಸ್ತಾದ್‌ರ ಪುತ್ರ ಕೆ.ಪಿ.ಇರ್ಶಾದ್ ಹುಸೈನ್ ದಾರಿಮಿ, ಇಲ್ಯಾಸ್ ಅರ್ಶದಿ ಆತೂರು, ಮೆಟ್ರೋ ಶಾಹುಲ್ ಹಮೀದ್ ಹಾಜಿ ಮಾತನಾಡಿದರು.

ಮಸೀದಿಯ ಅಧ್ಯಕ್ಷ ಎಂ.ಎ.ಅಹ್ಮದ್ ಬಾವಾ ಅಧ್ಯಕ್ಷತೆ ವಹಿಸಿದ್ದರು. ಅಡ್ಡೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಶರೀಫ್ ದಾರಿಮಿ, ಟಿ. ಸೈಯ್ಯದ್ ತೋಕೂರು, ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ಅಧ್ಯಕ್ಷ ಟಿ.ಪಿ.ಜಮಾಲುದ್ದೀನ್ ದಾರಿಮಿ, ಜಿ.ಝಕರಿಯಾ ಹಾಜಿ, ಮಸೀದಿಯ ಉಪಾಧ್ಯಕ್ಷ ಎ.ಕೆ.ರಿಯಾಝ್, ಕೋಶಾಧಿಕಾರಿ ಎ.ಕೆ.ಹಾರಿಸ್, ಹಂಝ ಮುಸ್ಲಿಯಾರ್, ಅಬೂಬಕ್ಕರ್ ಸಿದ್ದೀಕ್ ದಾರಿಮಿ, ಆರೀಫ್ ಕಮ್ಮಾಜೆ, ಹಸನ್ ಪೊನ್ನೆಲ, ಕೆ.ಆದಂ ಮತ್ತಿತರರು ಉಪಸ್ಥಿತರಿದ್ದರು.

ಎಸ್ಕೆಎಸ್ಸೆಸೆಫ್ ಕಾಂಜಿಲಕೋಡಿ ಶಾಖೆಯ ಅಧ್ಯಕ್ಷ ಮುಹಮ್ಮದ್ ಹಾರಿಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಅಡ್ಡೂರು ವಂದಿಸಿದರು. ಎಸ್ಕೆಎಸ್ಸೆಸೆಫ್ ದ.ಕ. ಜಿಲ್ಲಾ ಕಾರ್ಯದರ್ಶಿ ಎಂ.ಎ.ಮುಹಮ್ಮದ್ ಕುಂಞಿ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News