ಮೊಂಟೆಪದವು: ಟೀಂ ಇಂಡಿಯಾ ಕಾರ್ಯಕ್ರಮ

Update: 2019-02-17 13:00 GMT

ಮುಡಿಪು, ಫೆ.17: ಕೇಂದ್ರ ಸರಕಾರ ಮತ್ತು ಬಿಜೆಪಿಯು ಸೈನಿಕರ ಹೆಸರಿನಲ್ಲಿ ಸುಳ್ಳು ಹೇಳಿ ರಾಜಕಾರಣ ಮಾಡುವುದನ್ನು ಬಿಟ್ಟು ಸೈನಿಕರ ಸುರಕ್ಷತೆಗೆ ಅತ್ಯಾಧುನಿಕ ವಾಹನ, ಸುರಕ್ಷತಾ ಉಪಕರಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಟೀಂ ಇಂಡಿಯಾ ಸಂಘಟನೆಯ ಮುಖಂಡ ಅಶ್ರಫ್ ಕೆ.ಸಿ. ರೋಡ್ ಹೇಳಿದರು.

ಮೊಂಟೆಪದವು ಜಂಕ್ಷನ್‌ನಲ್ಲಿ ಟೀಂ ಇಂಡಿಯಾದ ವತಿಯಿಂದ ಶನಿವಾರ ಹುತಾತ್ಮ ಯೋಧರಿಗೆ ನಮನ, ಪಾಕ್ ಭಯೋತ್ಪಾದಕರು ನಡೆಸಿದ ದುಷ್ಕೃತ್ಯದ ಖಂಡನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕೆಲವರಿಗೆ ದೇಶಕ್ಕಿಂತ ವ್ಯಕ್ತಿ ಮುಖ್ಯವಾಗಿರುವುದು ಖೇದಕರವಾಗಿದ್ದು ವ್ಯಕ್ತಿ ನಶ್ವರ, ದೇಶ ಅಮರ. ಹೀಗಾಗಿ ವ್ಯಕ್ತಿಗಿಂತ ದೇಶದ ಮೇಲೆ ನಮಗೆ ಪ್ರೀತಿ , ಅಭಿಮಾನ ಮೂಡಬೇಕು ಎಂದು ಅಶ್ರಫ್ ಕೆ.ಸಿ.ರೋಡ್ ನುಡಿದರು.

ಸಭೆಯಲ್ಲಿ ಡಿವೈಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಗ್ರಾಪಂ ಸದಸ್ಯರಾದ ಇಸ್ಮಾಯೀಲ್ ಮೋನು, ಫಯಾಝ್ ಮೊಂಟೆಪದವು, ಗ್ರಾಪಂ ಮಾಜಿ ಸದಸ್ಯ ಎಂ.ಎಂ. ಕುಂಞಿ, ಮಸೀದಿಯ ಕಾರ್ಯದರ್ಶಿ ಅಬ್ದುಲ್ ಖಾದರ್, ಉದ್ಯಮಿ ಅಶ್ರಫ್ ಪದಿಂಜಾರ್, ಡಿವೈಎಫ್‌ಐ ಮೊಂಟೆಪದವು ಘಟಕದ ಅಧ್ಯಕ್ಷ ಸಿರಾಜ್ ಬಿಎಂ, ಸಾಮಾಜಿಕ ಮುಖಂಡರಾದ ಹಿದಾಯತ್, ಶಂಶುದ್ದೀನ್ ಯು.ಟಿ., ಆರಿಫ್ ಮೊಂಟೆಪದವು, ಶಾಫಿ ಬಿ.ಎಂ., ಮನ್ಸೂರ್ ತೋಟಾಲ್, ಮಂಗಳೂರು ವಿವಿ ವಿದ್ಯಾರ್ಥಿ ನಾಯಕ ಸಿರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News