ಉಮ್ಮರ್ ಹಾಜಿ ಪರ್ಲಡ್ಕ ನಿಧನ

Update: 2019-02-17 13:04 GMT

ಪುತ್ತೂರು, ಫೆ. 17: ತಾಲೂಕಿನ ಪರ್ಲಡ್ಕ ನಿವಾಸಿ ಎಚ್.ಕೆ. ಉಮ್ಮರ್ ಹಾಜಿ (80) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದರು.

ಪುತ್ತೂರಿನಲ್ಲಿ ಮೊದಲಿಗೆ ಗ್ರಾಮಕರಣಿಕರಾಗಿದ್ದ ಉಮ್ಮರ್ ಹಾಜಿ ಅವರು ಬಳಿಕ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ತಪಾಸಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ವ್ಯಾಪಾರವನ್ನು ನಡೆಸುತ್ತಿದ್ದರು. ಪರ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News