×
Ad

ಜಮ್ಮು ಪುಲ್ವಾಮ ದಾಳಿ: ವೆಲ್‌ಫೇರ್ ಪಾರ್ಟಿ ಶ್ರದ್ಧಾಂಜಲಿ

Update: 2019-02-17 18:49 IST

ಮಂಗಳೂರು, ಫೆ.17: ಜಮ್ಮು ಕಾಶ್ಮೀರದಲ್ಲಿ ಹೆದ್ದಾರಿ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವೆಲ್‌ಫೇರ್ ಪಾಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿ, ಶ್ರದ್ಧಾಂಜಲಿ ಅರ್ಪಿಸಿತು.

‘ನಿಜವಾಗಿಯೂ ಈ ಜೈಶೆ ಮುಹಮ್ಮದ್ ಎಂಬ ಸಂಘಟನೆಯ ಹಿಂದೆ ಯಾರಿದ್ದಾರೆ? ಅವರಿಗೆ ಯಾರು ಶಸ್ತ್ರಾಸ್ತ್ರವನ್ನು ಪೂರೈಕೆ ಮಾಡುತ್ತಿದ್ದಾರೆ? ಅವರನ್ನು ಆರ್ಥಿಕವಾಗಿ ಬಲಪಡಿಸುತ್ತಿರುವವರು ಯಾರು? ಎಂಬ ಕುರಿತು ತನಿಖೆ ನಡೆಸಲು ದೇಶದ ಗೃಹ ಇಲಾಖೆಯು ಇನ್ನೂ ಮುಂದುವರಿಯುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ ವೆಲ್‌ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ, ವೀರಸ್ವರ್ಗ ಹೊಂದಿದ ಎಲ್ಲ ಯೋಧರ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಸಾಮರ್ಥ್ಯವನ್ನು ಆ ಭಗವಂತ ಕರುಣಿಸಲಿ ಎಂದು ಹೇಳಿದರು.

ಈ ಸಂದರ್ಭ ಪಕ್ಷದ ಜಿಲ್ಲಾ ಕಾರ್ಯದರ್ಶಿ ಫೈಝಲ್ ಬಿನ್ ಇಸ್ಮಾಯೀಲ್, ಪ್ರಧಾನ ಕಾರ್ಯದರ್ಶಿ ಸರ್ಫರಾಝ್ ಅಡ್ವೋಕೇಟ್, ಪಕ್ಷದ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್ ಹಾಗೂ ಜಿಲ್ಲಾ ಉಪಾಧ್ಯಕ್ಷ ಎಸ್.ಎಂ. ಮುತ್ತಲಿಬ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News