ಜಮ್ಮು ಪುಲ್ವಾಮ ದಾಳಿ: ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಖಂಡನೆ

Update: 2019-02-17 13:20 GMT

ಮಂಗಳೂರು, ಫೆ.17: ಜಮ್ಮು ಕಾಶ್ಮೀರ ಹೆದ್ದಾರಿ ಪುಲ್ವಾಮದಲ್ಲಿ ಆತ್ಮಹತ್ಯಾ ಬಾಂಬರ್ ಸಿ ಆರ್ ಪಿಎಫ್ ಯೋಧರ ಬಸ್ ಮೇಲೆ ದಾಳಿ ನಡೆಸಿ ಸೇನಾ ಯೋಧರ ಸಾವಿಗೆ ಕಾರಣವಾದ ಕೃತ್ಯ ಅಮಾನವೀಯ ಎಂದು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಖಂಡಿಸಿದೆ.

ಹೇಳಿಕೆಯಲ್ಲಿ ತಿಳಿಸಿರುವ ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಇದು ನಾಗರಿಕ ವ್ಯವಸ್ಥೆ ಶಿರಭಾಗಿಸುವಂತಹ ಹೇಯ ಕೃತ್ಯವಾಗಿದೆ. ಇಂತಹ ಕೃತ್ಯಗಳು ಹತಾಶೆಯ ಮಾನಸಿಕ ಸ್ಥಿಮಿತವನ್ನು ಪ್ರದರ್ಶಿಸುತ್ತದೆ. ತಮ್ಮ ಜೀವವನ್ನು ಪಣಕೊಟ್ಟು ದೇಶ ರಕ್ಷಣೆ ಮಾಡುವ ವೀರ ಸೇನಾನಿಗಳು ಉಗ್ರರ ಅಟ್ಟಹಾಸಕ್ಕೆ ತಮ್ಮ ಪ್ರಾಣವನ್ನೇ ತೊರೆದು ವೀರ ಮರಣ ಹೊಂದಿದ್ದಾರೆ. ರಕ್ತ ಪಿಪಾಸುಗಳ ಮುಂದೆ ರಕ್ತವನ್ನು ಚೆಲ್ಲಿ ದೇಹವನ್ನು ಈ ಮಣ್ಣಿಗೆ ಅರ್ಪಿಸಿದ ದೇಶದ ಹೆಮ್ಮೆಯ ಸೈನಿಕರಿಗೆ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸುವುದಾಗಿ ಪ್ರಕಟನೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News