ಮಲಬಾರ್ ಗೋಲ್ಡ್‌ನಿಂದ ‘ಆರ್ಟಿಸ್ಟ್ರಿ’ ಆಭರಣ ಪ್ರದರ್ಶನ, ಮಾರಾಟಕ್ಕೆ ಚಾಲನೆ

Update: 2019-02-17 14:25 GMT

ಮಂಗಳೂರು, ಫೆ.16: ಖ್ಯಾತ ಚಿನ್ನಾಭರಣ ಮಾರಾಟ ಮಳಿಗೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ಚಿನ್ನ, ವಜ್ರ ಹಾಗೂ ಅಮೂಲ್ಯವಾದ ರತ್ನಾಭರಣಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ‘ಆರ್ಟಿಸ್ಟರಿ ಬ್ರಾಂಡಡ್ ಜ್ಯುವೆಲ್ಲರಿ ಶೋ’ ಶನಿವಾರ ಮಂಗಳೂರಿನ ಫಳ್ನೀರ್ ರಸ್ತೆಯಲ್ಲಿನ ಶೋರೂಂನಲ್ಲಿ ಆರಂಭಗೊಂಡಿತು.

ಆ್ಯಟೊಮ್ ಫಿಟ್ನೆಸ್ ಕ್ಲಬ್‌ನ ಆಡಳಿತ ಪಾಲುದಾರೆ ಮೈತ್ರಿ ಮಲ್ಲಿ ಹಾಗೂ ವಿಜಯಾ ಎಂಟರ್‌ಪ್ರೈಸಸ್‌ನ ಆಡಳಿತ ನಿರ್ದೇಶಕ ವಿಜಯ್ ಮಲ್ಲಿ, ದಂತ ತಜ್ಞೆ ಡಾ.ಚಾಂದಿನಿ ಶ್ರೀ ಕುಮಾರ್ ಹಾಗೂ ನ್ಯಾಯವಾದಿ, ನೋಟರಿ ಎಲಿಝಬೆತ್ ನೀಲಿಯಾರ ಅತಿಥಿಗಳಾಗಿ ಆಗಮಿಸಿ ದ್ದರು. ಗ್ರಾಹಕರು, ಶೋರೂಂನ ಮುಖ್ಯಸ್ಥ ಶರತ್ ಚಂದ್ರನ್ ಹಾಗೂ ಉಡುಪಿ ಶೋರೂಂನ ಮುಖ್ಯಸ್ಥರಾದ ಹಫೀಝ್ ರಹ್ಮಾನ್ ಹಾಗೂ ಮ್ಯಾನೇಜ್‌ಮೆಂಟ್ ತಂಡದ ಇತರ ಸದಸ್ಯರು ಉಪಸ್ಥಿತರಿದ್ದರು.

‘ಮಲಬಾರ್’ ಗೋಲ್ಡ್‌ನ ಉಪ ಬ್ರಾಂಡ್‌ಗಳಾದ ‘ಮೈನ್’ ಡೈಮಂಡ್ ಜ್ಯುವೆಲ್ಲರಿ, ‘ಎರಾ’ ಅನ್‌ಕಟ್ ಡೈಮಂಡ್ ಜ್ಯುವೆಲ್ಲರಿ, ಭಾರತೀಯ ಪರಂಪರೆಯ ಆಭರಣ ‘ಡಿವೈನ್’, ಹ್ಯಾಂಡಿಕ್ರಾಫ್ಟ್ ಆಭರಣ ‘ಎತ್ನಿಕ್ಸ್’, ಜೆಮ್‌ಸ್ಟೋನ್ ಆಭರಣ ‘ಪ್ರೆಸಿಯಾ’ ಹಾಗೂ ಮಕ್ಕಳ ಆಭರಣ ‘ಸ್ಟಾರ್‌ಲೆಟ್’ ಇವುಗಳ ಆಯ್ದ ಅತ್ಯುತ್ತಮ ರಚನೆಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕಿಡಲಾಗಿದೆ.

ವಿಶೇಷ ಕೊಡುಗೆಗಳೊಂದಿಗೆ ಈ ವಿಶಿಷ್ಟ ಆಭರಣಗಳನ್ನು ಖರೀದಿಸುವ ಅವಕಾಶವಿರುವ ‘ಆರ್ಟಿಸ್ಟ್ರಿ’ ಜ್ಯುವೆಲ್ಲರಿ ಪ್ರದರ್ಶನವು ಕಲಾ ಆಸಕ್ತರ ಕಣ್ಣಿಗೆ ಹಬ್ಬವಾಗಲಿದೆ. ಫೆ.16ರಿಂದ 24ರವರೆಗೆ ನಡೆಯಲಿರುವ ಈ ಆಭರಣ ಪ್ರದರ್ಶನ ದಲ್ಲಿ ಗ್ರಾಹಕರು ವಿಶೇಷ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಚಿನ್ನಾಭರಣದ ಮೇಕಿಂಗ್ ಶುಲ್ಕದಿಂದ 30 ಶೇಕಡ ಕಡಿತ ಹಾಗೂ ವಜ್ರದ ವೌಲ್ಯದ ಮೇಲೆ ಶೇ.20ರವರೆಗೆ ಕಡಿತವನ್ನು ಗ್ರಾಹಕರು ಪಡೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News