ಜನ ಸೇವಕ ರಿಕ್ಷಾ ಚಾಲಕರಿಗೆ ಜೀವನ ಭದ್ರತೆ ಅಗತ್ಯ: ಪ್ರಮೋದ್ ಮಧ್ವರಾಜ್

Update: 2019-02-17 14:43 GMT

ಉಡುಪಿ, ಫೆ.17: ಅಟೋ ಚಾಲಕರು ಬಿಸಿಲು ಮಳೆ ರಾತ್ರಿ ಹಗಲು ಎನ್ನದೆ ದಿನದ 24 ಗಂಟೆಗಳ ಕಾಲ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ರೀತಿಯ ಸೇವಾ ಮನೋಭಾವನೆಯಿಂದ ದುಡಿಯುವ ಆಟೋ ಚಾಲಕರ ಜೀವನ ಪೋಷಣೆಗಾಗಿ ಭದ್ರತೆ ಕೂಡ ಅಗತ್ಯ. ಆದುದರಿಂದ ಪ್ರತಿಯೊಬ್ಬ ರಿಕ್ಷಾ ಚಾಲಕರಿಗೆ ಭವಿಷ್ಯ ನಿಧಿ, ಆರೋಗ್ಯ ವಿಮೆ ಬಹಳ ಮುಖ್ಯ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಟನೆ ವತಿಯಿಂದ ಮಾಸ್ ಇಂಡಿಯಾ, ಮಾಹಿತಿ ಸೇವಾ ಸಮಿತಿ ಹಾಗೂ ಸಿದ್ಧಿ ವಿನಾಯಕ ಅಟೋ ಟ್ರಾವೆಲ್ಸ್ ಮತ್ತು ಏಜೆನ್ಸಿಯ ಸಹಯೋಗದೊಂದಿಗೆ ರವಿವಾರ ಚಿಟ್ಪಾಡಿ ದೇವಾಡಿಗರ ಸಂಘದ ಏಕನಾಥೇಶ್ವರಿ ಸಭಾಭವನದಲ್ಲಿ ಆಯೋಜಿಸಲಾದ ರಿಕ್ಷಾ ಚಾಲಕರಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಯೋಜನೆ ಮತ್ತು ಭವಿಷ್ಯನಿಧಿಯ ಉದ್ಘಾಟನೆ ಹಾಗೂ ಮಾಸ್ ಇಂಡಿಯಾ ಅಧ್ಯಕ್ಷರುಗಳಿಗೆ ಗುರುತು ಚೀಟಿ ವಿತರಣೆ ಮತ್ತು ವಲಯ ಒಂದರ ರಿಕ್ಷಾ ಚಾಲಕರ ಸಮಾ ವೇಶದಲ್ಲಿ ಅವರು ಮಾತನಾಡುತಿದ್ದರು.

ಸಮಾವೇಶವನ್ನು ಉದ್ಘಾಟಿಸಿದ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸೇವಾ ಮನೋಭಾವೆ ಯಿಂದ ಕೆಲಸ ಮಾಡುವವರ ಜೀವನ ಸುಂದರವಾಗಿರುತ್ತದೆ. ಇದಕ್ಕೆ ಹೆಚ್ಚು ಫಲ ಸಿಗಬೇಕಾದರೆ ದೇವರ ಅನುಗ್ರಹ ಅಗತ್ಯ. ಶ್ರದ್ಧೆ ಹಾಗೂ ನಂಬಿಕೆ ಇದ್ದರೆ ಮಾತ್ರ ಭಗವಂತನ ಅನುಗ್ರಹ ದೊರೆಯುತ್ತದೆ ಎಂದರು.

ಭಾರತ ವಿಶ್ವ ಗುರು ಆಗಬೇಕಾದರೆ ನಾವೆಲ್ಲರು ಜ್ಞಾನವಂತರಾಗಬೇಕು. ಆದುದರಿಂದ ಜ್ಞಾನ ಸಂಪಾದಿಸುವ ಕೆಲಸಕ್ಕೆ ಹೆಚ್ಚಿನ ಗಮನ ಕೊಡುವ ಕಾರ್ಯ ಆಗಬೇರು. ಅರ್ಥ ತಿಳಿದುಕೊಳ್ಳದೆ ಮಾಡುವ ಆರಾಧನೆ ಬಹುಕಾಲ ಉಳಿ ಯುವುದಿಲ್ಲ. ಹಾಗಾಗಿ ಪ್ರತಿಯೊಂದು ಆರಾಧನೆಯ ಅರ್ಥವನ್ನು ತಿಳಿದು ಕೊಳ್ಳಬೇಕು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಮನೋಹರ್ ಶೆಟ್ಟಿ, ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು, ಮಾಸ್ ಇಂಡಿಯಾ ಅಧ್ಯಕ್ಷ ಜಿ.ಎ.ಕೋಟಿಯಾರ್, ನಂದಾ ಜಿ.ಕೋಟಿಯಾರ್, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಟನೆಯ ಅಧ್ಯಕ್ಷ ರಾಜೇಶ್ ಬಿ.ಶೆಟ್ಟಿ, ಸಿದ್ದಿವಿನಾಯಕ ಅಟೋ ಟ್ರಾವೆಲ್ಸ್‌ನ ಮಾಲಕ ವಿಠಲ ಜತ್ತನ್ ಉಪಸ್ಥಿತರಿದ್ದರು. ಪ್ರಶಾಂತ್ ಶೆಟ್ಟಿ ಹಾವಂಜೆ ಸಾ್ವಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News