×
Ad

ಭಯೋತ್ಪಾದನೆ ನಾಶವಾಗದೆ ನೆಮ್ಮದಿ ಅಸಾಧ್ಯ: ಜಯನ್ ಮಲ್ಪೆ

Update: 2019-02-17 20:25 IST

ಮಲ್ಪೆ, ಫೆ.17: ನಮ್ಮನ್ನು ಆಳುವ ಪ್ರಭುಗಳು ಭಯೋತ್ಪಾದನೆ ಹರಡದಂತೆ ಮದ್ದು ಹುಡುಕುತ್ತಿದ್ದಾರೆಯೇ ಹೊರತು ಭಯೋತ್ಪಾದನೆಯೆಂಬ ರೋಗವನ್ನು ನಾಶ ಮಾಡಲು ಯಾವುದೇ ಕ್ರಮತೆಗೆದುಕೊಳ್ಳುತ್ತಿಲ್ಲ. ಭಯೋತ್ಪಾದನೆ ನಾಶ ವಾಗದೆ ಭಾರತದಲ್ಲಿ ನೆಮ್ಮದಿ ಅಸಾಧ್ಯ ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ರವಿವಾರ ಆಯೋಜಿಸಲಾದ ಪುಲ್ವಾಮದಲ್ಲಿ ಉಗ್ರರ ದಾಳಿಗೆ ವೀರ ಮರಣ ಹೊಂದಿದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಭಯೋತ್ಪಾದನೆಯಿಂದ ದೇಶದ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಬುಡಮೇಲುಮಾಡಿ ಬೀತಿಯನ್ನು ಸೃಷ್ಟಿಸಿ ಮಾನವ ಕುಲದ ನಾಶಕ್ಕೆ ಕಾರಣವಾಗುತಿದ್ದರೂ ನಮ್ಮ ಆಳುವ ವ್ಯವಸ್ಥೆ ಅದನ್ನು ಹತಿತಿಕ್ಕುವ ಬದಲು ಅದರ ಬೆಂಕಿಯಲ್ಲೇ ರಾಜಕಾರಣ ಮಾಡುತಿತಿರುವುದು ಈ ದೇಶದ ದುರಂತ ಎಂದರು.

ಹಿರಿಯ ದಲಿತ ಮುಖಂಡ ಸುಂದರ ಕಪ್ಪೆಟ್ಟು, ಗಣೇಶ್ ನೆರ್ಗಿ,ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್, ದಲಿತ ಯುವ ನಾಯಕರಾದ ರಮೇಶ್ ಪಾಲ್, ಅನಿಲ್ ಅಂಬಲಪಾಡಿ, ಸಂತೋಷ ಕಪ್ಪೆಟ್ಟು, ಸುಧಾಕರ್ ಬಾಪುತೋಟ, ಆನಂದ ಬ್ರಹ್ಮಾವಾರ, ಗುಣವಂತ ತೊಟ್ಟಂ, ಮಹೇಶ್ ಬಲ ರಾಮನಗರ, ದಿನೇಶ್ ಮೂಡಬೆಟ್ಟು, ಮಂಜುನಾಥ ಕಪ್ಪೆಟ್ಟು, ಪ್ರಶಾಂತ್, ಕಿಶೋರ್, ಸುಶೀಲ್ ಕುಮಾರ್, ನವೀನ್, ಉದಯ, ಸೋಮನಾಥ, ಕೃಷ್ಣ, ಸುನೀಲ್ ಉಪಸ್ಥಿತರಿದ್ದರು. ಮಹೇಶ್ ಮೂಡುಬೆಟ್ಟು ಕಾರ್ಯಕ್ರಮ ನಿರೂ ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News