ಉಡುಪಿ ಜಿಲ್ಲಾಮಟ್ಟದ ನಾಯಕತ್ವ ಬೆಳವಣಿಗೆ ಕಾರ್ಯಾಗಾರ

Update: 2019-02-17 14:56 GMT

ಮಣಿಪಾಲ, ಫೆ.17: ಉತ್ತಮ ನಾಯಕನಾಗಲು ಹೃದಯ ವೈಶಾಲ್ಯತೆಯ ಗುಣವನ್ನು ಹೊಂದಿರಬೇಕು ಮತ್ತು ಸಮಾಜದ ಎಲ್ಲ ವರ್ಗಗಳನ್ನು ಜಾತಿ, ಧರ್ಮ, ಬಡವ, ಧನಿಕ ಎನ್ನದೆ ಎಲ್ಲರನ್ನು ಸಮಾನವಾಗಿ ಗೌರವಿಸಿ ಅವರ ಜೊತೆ ಪ್ರೀತಿಯಿಂದ ನಡೆದು ಕೊಳ್ಳಬೇಕು ಎಂದು ಮಣಿಪಾಲ ಡಾ.ಟಿ.ಎಂ. ಎ. ಪೈ ಪಾಲಿಟೆಕ್ನಿಕ್‌ನ ಶೈಕ್ಷಣಿಕ ಸಂಯೋಜಕ ಟಿ.ರಂಗ ಪೈ ಹೇಳಿದ್ದಾರೆ.

ಮಣಿಪಾಲದ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಐ ಬ್ಯಾಟ್ ಸಂಸ್ಥೆ ಮತ್ತು ಉಡುಪಿ ಜಿಲ್ಲಾ ವಿದ್ಯಾರ್ಥಿ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಜಿಲ್ಲೆಯ ಎಲ್ಲ ಕಾಲೇಜುಗಳ ಅಧ್ಯಕ್ಷರುಗಳು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ನಾಯಕತ್ವ ಬೆಳವಣಿಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಉಡುಪಿ ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನಾ ವಿಭಾಗದ ವಕ್ತಾರ ಹರೀಶ್, ದಶರಥರಾಜ್ ಶೆಟ್ಟಿ, ಪ್ರೊ.ಮನಮೋಹನ್ ಕೆ., ನಮೇಶ್ ಮಲ ರಾವುತ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ನರೇಂದ್ರ ಪೈ, ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ರಂಜನ್, ಪ್ರಧಾನ ಕಾರ್ಯದರ್ಶಿ ಸಚಿನ್ ಬಂಗೇರ, ಜಿಲ್ಲಾ ಕಾಲೇಜು ಒಕ್ಕೂಟದ ಸೂರಜ್ ಇಂದ್ರಾಳಿ, ಸೃಜನ್ ಕುಂದರ್, ಸ್ನೇಹ ಸಂಗಮ ಅಧ್ಯಕ್ಷ ಹರೀಶ್ ಜಿ.ಕಲ್ಮಾಡಿ, ಸತೀಶ್ ಎನ್. ಉಪಸ್ಥಿತರಿದ್ದರು.

ಐ ಬ್ಯಾಟ್ನ ಪ್ರಧಾನ ಕಾರ್ಯದರ್ಶಿ ದಶರಥರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿ ದ್ದರು. ಮಣಿಪಾಲದ ಎಂಐಟಿ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News