ಉಳ್ಳಾಲ: ಮಜ್ಲಿಸುನ್ನೂರ್ ಮಹಾಸಂಗಮ ಪ್ರಚಾರಕ್ಕೆ ಚಾಲನೆ

Update: 2019-02-17 15:11 GMT

ಉಳ್ಳಾಲ, ಫೆ. 17: ಎಸ್ಕೆಎಸೆಸೆಫ್ ಕನ್ಯಾನ ಆಶ್ರಯದಲ್ಲಿ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಮಜ್ಲಿಸ್‍ನ್ನೂರು ಮಹಾ  ಸಂಗಮ ನಡೆಸಲು ಉದ್ದೇಶಿಸಿದ್ದು, ಕಾರ್ಯಕ್ರಮಕ್ಕೆ ಸಹಕಾರ ನೀಡುವ ಮೂಲಕ ಸಹಕರಿಸಬೇಕೆಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು. 

ಅವರು ಫೆ.19ರಂದು ನಡೆಯಲಿರುವ ಎಸ್ಕೆಎಸೆಸೆಫ್ ಕನ್ಯಾನ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಏಕದಿನ ಮತ ಪ್ರವಚನ ಹಾಗೂ ಮಜ್ಲಿಸುನ್ನೂರ್ ಮಹಾಸಂಗಮದ ವಾಹನ ಪ್ರಚಾರ ಜಾಥಾಕ್ಕೆ ಹಾಜಿ ಅಬ್ದುಲ್ ರಶೀದ್ ಚಾಲನೆ ನೀಡಿ ಮಾತನಾಡಿದರು. 

ಸಯ್ಯದ್ ಹಾದಿ ತಂಙಳ್ ಮಾತನಾಡಿ ಮಹಾನ್ ವಿದ್ವಾಂಸರು ಸೇರಿ ನಡೆಸಲಿರುವ ಮಜ್ಲಿಸುನ್ನೂರು ಕಾರ್ಯಕ್ರಮವನ್ನು ಅಪಾರ ಸಂಖ್ಯೆಯಲ್ಲಿ ಜನರು ಸೇರಿ ಯಶಸ್ಸುಗೊಳಿಸಬೇಕಾಗಿದೆ ಎಂದು ಕರೆ ನೀಡಿದರು. 

ಈ ಸಂದರ್ಭ ಖಾಸಿಂ ದಾರಿಮಿ ಕಿನ್ಯ, ಅಮೀರ್ ತಂಙಳ್ ಕಿನ್ಯ, ಉಸ್ತಾದ್ ಹಾರೂನ್ ಅಹ್ಸನಿ, ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮೊಹಮ್ಮದ್ ತ್ವಾಹ, ಉಳ್ಳಾಲ ದರ್ಗಾ ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಹಾಫಿಲ್ ಝೈನ್ ಸಖಾಫಿ, ಉಸ್ತಾದ್ ಹಮೀದ್ ಬಾಖವಿ ಬೈರಕಟ್ಟೆ, ಸಯ್ಯಿದ್ ಹಾದಿ ತಂಙಳ್, ಮಜೀದ್ ದಾರಿಮಿ, ಹನೀಪ್ ಪುತ್ತೂರು, ಉಮ್ಮರ್ ಎಸ್.ಕೆ., ಅಬೂಬಕ್ಕರ್ ಹಂಗ್ರಿ, ಹನೀಫ್ ಪೊಯ್ಯಗುಡ್ಡೆ, ಇಸ್ಮಾಯಿಲ್ ಕುಕ್ಕಾಜೆ, ಕಲಂದರ್ ಕುಕ್ಕಾಜೆ, ಸರ್ಫುದ್ದೀನ್ ಕುಕ್ಕಾಜೆ, ರಝಾಕ್ ಪೊಯ್ಯಗುಡ್ಡೆ, ಅಝೀಝ್ ಪೊಯ್ಯಗುಡ್ಡೆ ಅಬ್ದುಲ್ಲಾ ದಾರಿಮಿ ಪೊಯ್ಯಗದ್ದೆ ಇನ್ನಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News